BIG NEWS: ನಮ್ಮ ಮೆಟ್ರೋ 2 ಕಾರಿಡಾರ್‌ ಗಳಲ್ಲಿ 37.12 ಕಿ.ಮೀ. ಉದ್ದದ ಡಬಲ್‌ ಡೆಕ್ಕರ್‌ ನಿರ್ಮಾಣ: ಸಂಪುಟ ಅನುಮೋದನೆ

ಬೆಂಗಳೂರು: ನಮ್ಮ ಮೆಟ್ರೋ 2 ಕಾರಿಡಾರ್‌ಗಳಲ್ಲಿ 37.12 ಕಿ.ಮೀ. ಉದ್ದದ ಡಬಲ್‌ ಡೆಕ್ಕರ್‌ ನಿರ್ಮಾಣ, ಮೆಟ್ರೋ ವಯಾಡಕ್ಟ್‌ ಜೊತೆಗೆ ಎಲಿವೇಟೆಡ್‌ ರಸ್ತೆಯನ್ನು ₹9,700 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ.

ತನ್ನ ಉತ್ಕೃಷ್ಟ ದರ್ಜೆಯ ಸೇವೆ ಮತ್ತು ಸೌಲಭ್ಯಕ್ಕೆ ಹೆಸರುವಾಸಿಯಾಗಿರುವ ನಮ್ಮ ಮೆಟ್ರೋ ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿದೆ. ನಗರದ ಕೊನೆಯ ಮೈಲಿವರೆಗೂ ಸಂಪರ್ಕ ಕಲ್ಪಿಸುವುದು ನಮ್ಮ ಗುರಿಯಾಗಿದ್ದು, ಮೆಟ್ರೋ ಜಾಲ ವಿಸ್ತರಣೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ.

ಈ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ಯೋಜನೆಯಡಿ ಜೆ.ಪಿ ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಹಾಗೂ ಹೊಸಹಳ್ಳಿ, ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ 2 ಕಾರಿಡಾರ್‌ಗಳಲ್ಲಿ 37.12 ಕಿ.ಮೀ. ಉದ್ದದ ಡಬಲ್‌ ಡೆಕ್ಕರ್‌ ನಿರ್ಮಾಣ, ಮೆಟ್ರೋ ವಯಾಡಕ್ಟ್‌ ಜೊತೆಗೆ ಎಲಿವೇಟೆಡ್‌ ರಸ್ತೆಯನ್ನು ₹9,700 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read