ಬೆಂಗಳೂರು: ಪ್ರತಿ ವರ್ಷದಂತೆ ಪ್ರಸಕ್ತ ವರ್ಷ ನವೆಂಬರ್ 26 ರಂದು “ಸಂವಿಧಾನ ದಿನ” ವನ್ನು ಆಚರಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಸಂದೀಪ್ ಬಿ.ಕೆ. ಸುತ್ತೋಲೆ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಎಲ್ಲರಿಗೂ ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಬಿತ್ತರಿಸುವುದು. ಈ ರಾಷ್ಟ್ರೀಯ ಆಚರಣೆಯಲ್ಲಿ ಹೆಚ್ಚಿನ ಜನರು ಭಾಗವಹಿಸುವುದು, ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು/ಕಾಲೇಜುಗಳು/ಸಂಸ್ಥೆಗಳು/ಸ್ವಾಯತ್ತ ಸಂಸ್ಥೆಗಳು/PSUs ಗಳು ಸೇರಿದಂತೆ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ದಿನಾಂಕ:26.11.2025 ರಂದು ಸಾಮೂಹಿಕವಾಗಿ ಓದುವುದರ ಮೂಲಕ ಮತ್ತು ಸಂವಿಧಾನದ ಮೌಲ್ಯಗಳು / ಮೂಲ ಆಶಯಗಳ ಬಗ್ಗೆ ಚರ್ಚೆ / ರಸಪ್ರಶ್ನೆ ಕಾರ್ಯಕ್ರಮಗಳನ್ನು ಮತ್ತು ವೆಬಿನಾರ್‌ಳನ್ನು ಆಯೋಜಿಸಿ ಸಂವಿಧಾನ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲು ಸೂಚಿಸಿದ್ದಾರೆ.


