HomeKarnatakaBIG NEWS : ‘ಕರ್ನಾಟಕ ಬಂದ್’ ದಿನಾಂಕ ಬದಲಾಯಿಸಿ : 'ಕ್ಯಾಮ್ಸ್' ಪ್ರಧಾನ ಕಾರ್ಯದರ್ಶಿ ಶಶಿಕುಮಾರ್...

BIG NEWS : ‘ಕರ್ನಾಟಕ ಬಂದ್’ ದಿನಾಂಕ ಬದಲಾಯಿಸಿ : ‘ಕ್ಯಾಮ್ಸ್’ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮನವಿ.!

ಬೆಂಗಳೂರು : ಮಾ.22 ಕ್ಕೆ ನಿಗದಿಯಾಗಿರುವ ‘ಕರ್ನಾಟಕ ಬಂದ್’ ಮುಂದೂಡಿ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್  ಮನವಿ ಸಲ್ಲಿಸಿದ್ದಾರೆ.

ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ಮಾ.22 ಕ್ಕೆ ನಿಗದಿಯಾಗಿರುವ ಕರ್ನಾಟಕ ಬಂದ್ ದಿನಾಂಕವನ್ನು ಮುಂದೂಡುವಂತೆ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ಬಂದ್ ಮಾಡಿದರೆ ಆಟೋ, ಬಸ್ ಸಂಚಾರ ಇರಲ್ಲ, ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್  ಮನವಿ ಮಾಡಿದ್ದಾರೆ.

1 ರಿಂದ 9 ನೇ ತರಗತಿ ಮಕ್ಕಳಿಗೆ ವಿವಿಧ ಪರೀಕ್ಷೆ ನಡೆಯಲಿದೆ. ಬಂದ್ ವೇಳೆ ಮಕ್ಕಳಿಗೆ ಶಾಲೆಗಳಿಗೆ ರಜೆ ಕೊಡುವುದಕ್ಕೆ ಆಗಲ್ಲ. ಮಕ್ಕಳ ಹಿತದೃಷ್ಟಿಯಿಂದ ಬಂದ್ ದಿನಾಂಕ ಬದಲಾಯಿಸುವಂತೆ ಅವರು ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular