GOOD NEWS: ಇನ್ನು ಕೇವಲ ಒಂದೇ ಗಂಟೆಯಲ್ಲಿ ನಗದುರಹಿತ ಆರೋಗ್ಯ ವಿಮೆ ಕ್ಲೇಮ್ ಇತ್ಯರ್ಥ: ಕಾಲಮಿತಿ ನಿಗದಿಗೆ ಸರ್ಕಾರ ಚಿಂತನೆ

ನವದೆಹಲಿ: ನಗದು ರಹಿತ ಆರೋಗ್ಯ ವಿಮೆ ಕ್ಲೇಮ್ ಅನ್ನು ಒಂದೇ ಗಂಟೆಯಲ್ಲಿ ಇತ್ಯರ್ಥಪಡಿಸಲು ಕಾಲಮಿತಿ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಆರೋಗ್ಯ ವಿಮೆ ಕ್ಲೇಮ್ ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ನಗದು ರಹಿತ ವಿಮೆ ಪಾವತಿ ಬೇಡಿಕೆಯನ್ನು ಒಂದು ಗಂಟೆಯಲ್ಲಿ ಅನುಮೋದಿಸುವುದು ಮತ್ತು ಮೂರು ಗಂಟೆಗಳಲ್ಲಿ ಅಂತಿಮ ಪ್ರಕ್ರಿಯೆಗಳನ್ನು ಇತ್ಯರ್ಥಪಡಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

2047ರೊಳಗೆ ದೇಶಾದ್ಯಂತ ಆರೋಗ್ಯ ವಿಮೆ ಬಳಕೆ ವಿಸ್ತರಣೆಗೆ ಸರ್ಕಾರ ಗುರಿ ಹೊಂದಿದ್ದು, ವಿಮೆ ಕ್ಲೇಮುಗಳು ವಿಳಂಬ ಆಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರಲ್ಲಿ ವಿಶ್ವಾಸವನ್ನು ಬೆಳೆಸುವುದು ಇದರ ಉದ್ದೇಶವಾಗಿದ್ದು, ಗ್ರಾಹಕರಿಗೆ ಅರ್ಥೈಸಿಕೊಳ್ಳಲು ಮತ್ತು ಬಳಸಲು ಅನುಕೂಲವಾಗುವಂತೆ ವಿಮೆಯ ಅರ್ಜಿಗಳನ್ನು ಸರಳೀಕರಿಸಲು ಏಜೆನ್ಸಿಗಳಿಗೆ ಸೂಚಿಸಲಾಗುವುದು.

ನಗದುರಹಿತ ವಿಮೆ ತ್ವರಿತ ಕ್ಲೇಮ್ ಆಗುವಂತೆ ಹೊಸ ನಿಯಮ ಜಾರಿಗೊಳಿಸಲಾಗುವುದು. ಇದರಿಂದ ಆರೋಗ್ಯ ವ್ಯವಸ್ಥೆ ಸುಧಾರಣೆಯಾಗಲಿದ್ದು, ವಿಮೆಯಲ್ಲಿ ಜನರ ವಿಶ್ವಾಸ ವೃದ್ಧಿಯಾಗಲಿದೆ. ಕೇಂದ್ರ ಸರ್ಕಾರದ ಕ್ರಮದಿಂದ ವಿಮೆ ಪಾಲಿಸಿದಾರರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read