HomeKarnatakaBIG NEWS : ರಾಜ್ಯದಲ್ಲಿ ಹೆಚ್ಚುತ್ತಿದೆ ಮಗು ಮಾರಾಟ ದಂಧೆ : ಮೂವರು ಆರೋಪಿಗಳು ಅರೆಸ್ಟ್.!

BIG NEWS : ರಾಜ್ಯದಲ್ಲಿ ಹೆಚ್ಚುತ್ತಿದೆ ಮಗು ಮಾರಾಟ ದಂಧೆ : ಮೂವರು ಆರೋಪಿಗಳು ಅರೆಸ್ಟ್.!

ಬೆಳಗಾವಿ : ರಾಜ್ಯದಲ್ಲಿ ಮಗು ಮಾರಾಟ ದಂಧೆ ಜಾಲವೊಂದು ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

ಹೌದು, ಹುಕ್ಕೇರಿ ತಾಲೂಕಿನ ಸುಲ್ತಾನ್ ಪುರದ ಅರ್ಚನಾ ಎಂಬುವವರ ಮಗುವನ್ನು ಖದೀಮರು 3 ಲಕ್ಷರೂಗೆ ಮಾರಾಟ ಮಾಡಿದ್ದರು. ಪ್ರಕರಣದ ಭೇದಿಸಿದ ಪೊಲೀಸರು ಸಂಗೀತ ತಾವಡೆ , ಮೋಹನ್ ತಾವಡೆ, ಸಂಗೀತ ಗೌಳಿ ಸೇರಿ ಮೂವರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮಕ್ಕಳನ್ನು ಮಾರಾಟ ಮಾಡಿದ್ರೆ ಎಚ್ಚರ ; 5 ವರ್ಷ ಜೈಲು ಶಿಕ್ಷೆ ಜೊತೆ 1 ಲಕ್ಷ ರೂ. ದಂಡ ಫಿಕ್ಸ್.!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಕ್ಕಳನ್ನು ಅನಧಿಕೃತವಾಗಿ ದತ್ತು ನೀಡುವುದು ಹಾಗೂ ಪಡೆಯುವುದು ಶಿಕ್ಷಾರ್ಹ ಅಪರಾಧ. ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 80 ಹಾಗೂ 81 ರನ್ವಯ ಯಾವುದೇ ವ್ಯಕ್ತಿಯಾಗಲಿ ಅಥವಾ ಸಂಸ್ಥೆಯಾಗಲಿ ಯಾವುದೇ ಅನಾಥ/ ಪರಿತ್ಯಜಿಸಲ್ಪಟ್ಟ ಮಗುವನ್ನು ದತ್ತು ನೀಡುವುದು ಅಥವಾ ಪಡೆಯುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿ ಅಥವಾ ಸಂಸ್ಥೆಗೆ 5 ವರ್ಷಗಳವರೆಗೆ ಕಾರಗೃಹ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಬಹುದು. ಈ ಅಪರಾಧದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಶಾಮೀಲಾದರೆ ಶಿಕ್ಷೆಯ ಅವಧಿ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular