ನವದೆಹಲಿ: ಬೆಂಗಳೂರಿನಲ್ಲಿ ಆಂಥ್ರೋಪಿಕ್ ಕಚೇರಿ ಆರಂಭಿಸಿದ ಬೆನ್ನಲ್ಲೇ ಮತ್ತೊಂದು ಟೆಕ್ ದೈತ್ಯ ಚಾಟ್ ಜಿಪಿಟಿ ಸೇವೆ ನೀಡುವ ಓಪನ್ ಎಐ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಶಾಖೆ ಪ್ರಾರಂಭಿಸುವುದಾಗಿ ಘೋಷಿಸಿದೆ.
ಅಮೆರಿಕ ಮೂಲದ ಟೆಕ್ ದೈತ್ಯ ಕಂಪನಿ ಓಪನ್ ಎಐ ಬೆಂಗಳೂರಿನಲ್ಲಿ ತನ್ನ ಕಚೇರಿ ಆರಂಭಿಸಲು ನಿರ್ಧರಿಸಿದೆ. ಬೆಂಗಳೂರಿನ ಜೊತೆಗೆ ವಾಣಿಜ್ಯ ನಗರಿ ಮುಂಬೈನಲ್ಲೂ ಕೂಡ ಹೊಸ ಕಚೇರಿ ಆರಂಭಿಸಲಿದೆ. ಕಳೆದ ವರ್ಷ ಓಪನ್ ಎಐ ದೆಹಲಿಯಲ್ಲಿ ಭಾರತದ ಮೊದಲ ಕಚೇರಿ ಪ್ರಾರಂಭಿಸಿತು. ಓಪನ್ ಎಐ ಚಾಟ್ ಜಿಪಿಟಿ ಜನಪ್ರಿಯ ಚಾಟ್ ಬಾಟ್ ಆಗಿದೆ. ಇದು ಬೆಂಗಳೂರಿನಲ್ಲಿಯೂ ಕಚೇರಿ ಆರಂಭಿಸಲಿದೆ.

