BIG NEWS : ‘ಮೆಹಬೂಬಾ’ ಚಿತ್ರದ ಶೂಟಿಂಗ್ ವೇಳೆ ಅವಘಡ: ‘ಬಿಗ್ ಬಾಸ್’ ವಿನ್ನರ್ ಶಶಿಗೆ ಗಾಯ

ಬೆಂಗಳೂರು : ‘ಬಿಗ್ ಬಾಸ್-6’ ವಿನ್ನರ್ ಶಶಿ ಸದ್ಯ ಮೆಹಬೂಬಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರದ ಶೂಟಿಂಗ್ ವೇಳೆ ಅವಘಡವೊಂದು ಸಂಭವಿಸಿದೆ.

ಮೆಹಬೂಬಾ ಸಿನಿಮಾದ ಶೂಟಿಂಗ್ ವೇಳೆ ಶಶಿ ಕಾಲಿಗೆ ಗಾಯಗಳಾಗಿದೆ. ಶೂಟಿಂಗ್ ನಲ್ಲಿ ಬಿಲ್ಡಿಂಗ್ ಹತ್ತುವ ಸೀನ್ ಇತ್ತು, ಈ ವೇಳೆ ನಿಯಂತ್ರಣ ತಪ್ಪಿ ಕೆಳಗಡೆ ಬಿದ್ದಿದ್ದಾರೆ, ಪರಿಣಾಮ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ.

ಮೆಹಬೂಬಾ ಸಿನಿಮಾಗೆ ಶಶಿ ಅವರೇ ಬಂಡವಾಳ ಹೂಡಿ ಅವರೇ ನಾಯಕನಾಗಿ ನಟಿಸಿದ್ದಾರೆ. ಕೇರಳದಲ್ಲಿ ನಡೆದ ರಿಯಲ್ ಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಶಶಿ ಜೊತೆ ನಾಯಕಿಯಾಗಿ ಗೊಂಬೆಗಳ ಲವ್ ಖ್ಯಾತಿಯ ಪಾವನ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾದ ರಿಲೀಸ್ ಡೇಟ್ ಶೀಘ್ರದಲ್ಲೇ ಗೊತ್ತಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read