BIG NEWS: ಸಿದ್ದರಾಮಯ್ಯ ರಾಜಕೀಯ ಪರಿಣತಿ ಬಗ್ಗೆಯೇ ಅನುಮಾನವಿದೆ ಎಂದ ಸಂಸದ ಪ್ರತಾಪ್ ಸಿಂಹ

ಮೈಸೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ಕ್ರೆಡಿಟ್ ವಾರ್ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಕ್ಸಮರ ಮುಂದುವರೆದಿದ್ದು, ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು-ಮೈಸೂರು ರಸ್ತೆ ಪೂರ್ತಿ ಕ್ಷೇತ್ರ ಪ್ರತಾಪ್ ಸಿಂಹ ಅವರದ್ದಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿರುವ ಪ್ರತಾಪ್ ಸಿಂಹ, ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಅವರ ರಾಜಕೀಯ ಪರಿಣತಿ ಬಗ್ಗೆ ಅನುಮಾನ ಮೂಡುತ್ತಿದೆ ಎಂದಿದ್ದಾರೆ.

ಬೆಂಗಳೂರಿನಿಂದ ಮೈಸೂರಿನವರೆಗೆ ಈ ದಶಪಥ ರಸ್ತೆ ಇರುವಂತದ್ದು. ಮಾರ್ಗಮಧ್ಯೆ ರಾಮನಗರ, ಚನ್ನಪಟ್ಟಣ, ಶ್ರೀರಂಗಪಟ್ಟಣ ಸಿಗುತ್ತದೆ. ಹಾಗಂತ ರಾಮನಗರ-ಬೆಂಗಳೂರು ರಸ್ತೆ ಅಂತಾ ಹೇಳಲು ಆಗುತ್ತಾ? ರಾಮನಗರ-ಮಳವಳ್ಳಿ ರಸ್ತೆಗೆ 2008ರಲ್ಲಿಯೇ ಅನುಮೋದನೆ ಸಿಕ್ಕಿದೆ. ರಾಮನಗರ-ಮಳವಳ್ಳಿ ರಸ್ತೆ ಕಾಮಗಾರಿಯಾಗಿದೆಯಾ? ಎಂದು ಪ್ರಶ್ನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read