HomeKarnatakaBIG NEWS: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಡೌಟು; ಅವರಿಗೆ ಚಾಮರಾಜಪೇಟೆಯೇ ಗತಿ ಎಂದ ಮಾಜಿ ಸಚಿವ

BIG NEWS: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಡೌಟು; ಅವರಿಗೆ ಚಾಮರಾಜಪೇಟೆಯೇ ಗತಿ ಎಂದ ಮಾಜಿ ಸಚಿವ

ಬಾಗಲಕೋಟೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರಕ್ಕಾಗಿ ಅಲೆದಾಡುವ ಅಲೆಮಾರಿಯಂತಾಗಿದ್ದಾರೆ. ಕೋಲಾರದಲ್ಲಿಯೂ ಸಿದ್ದರಾಮಯ್ಯ ಸ್ಪರ್ಧಿಸುವುದು ನನಗೆ ಈಗಲೂ ಡೌಟು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಅಲೆದಾಡುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಬೇಡ ಬಾದಾಮಿಗೆ ಹೋಗು..ಬಾದಾಮಿ ಬೇಡ ಕೋಲಾರಕ್ಕೆ ಹೋಗು…ಕೊನೆಗೆ ಕೋಲಾರ ಬೇಡ ಅಂದ್ರೆ ನಾಳೆ ಅವರಿಗೆ ಚಾಮರಾಜಪೇಟೆಯೇ ಗತಿ. ಜಮೀರ್ ಅಹ್ಮದ್ ಬಳಿ ಕುಳಿತು ಅಲ್ಲಾಹು ಅಕ್ಬರ್ ಅನ್ನೋದು ಬಿಟ್ರೆ ಬೇರೆ ದಾರಿಯಿಲ್ಲ ಅವರಿಗೆ ಎಂದು ವ್ಯಂಗ್ಯವಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದು ನನಗೆ ಈಗಲೂ ಡೌಟು. ಯಾಕೆ ಅಂತ ಅವರು ಅಲ್ಲಿ ನಿಂತ ಮೇಲೆ ಹೇಳುತ್ತೇನೆ. ಹೇಗೆ ಅಲ್ಲಿನ ಜನ ಸೋಲಿಸ್ತಾರೆ ಅಂತ ನನಗೆ ಗೊತ್ತು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಎಲ್ಲಾ ಕ್ಷೇತ್ರಗಳಿಂದ ಸ್ಪರ್ಧಿಸಿದರೂ ಸೋಲುವುದು ಖಚಿತ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular