BIG NEWS: ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ರಾಹುಲ್ ಕರ್ನಾಟಕ್ಕೆ ಮೊದಲ ಭೇಟಿ; ಸಹೋದರಿ ಪ್ರಿಯಾಂಕ ಸಾಥ್

ಮೋದಿ ಉಪನಾಮದ ಕುರಿತು ತಮ್ಮ ಹೇಳಿಕೆಯಿಂದಾಗಿ ಗುಜರಾತಿನ ಸೂರತ್ ನ್ಯಾಯಾಲಯದಿಂದ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಈಗ ಸಂಸತ್ ಸದಸ್ಯತ್ವದಿಂಲೂ ಅನರ್ಹಗೊಳಿಸಲಾಗಿದೆ. ಹೀಗಾಗಿ ಅವರು ತಮಗೆ ನೀಡಲಾಗಿದ್ದ ಅಧಿಕೃತ ನಿವಾಸವನ್ನು ತೊರೆದಿದ್ದಾರೆ.

ಈ ಎಲ್ಲಾ ಘಟನಾವಳಿಗಳ ಬಳಿಕ ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಸಹೋದರಿ ಪ್ರಿಯಾಂಕಾ ಕೂಡಾ ಸಾಥ್ ನೀಡುತ್ತಿದ್ದಾರೆ. ಉಭಯ ನಾಯಕರು ಕೋಲಾರದಲ್ಲಿ ನಡೆಯಲಿರುವ ‘ಜೈ ಭಾರತ್’ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. ಕಾರಣಾಂತರಗಳಿಂದ ನಾಲ್ಕು ಬಾರಿ ಈ ಸಮಾವೇಶ ಮುಂದೂಡಿಕೆಯಾಗಿದ್ದು, ಇದೀಗ ರಾಹುಲ್ ಸಂಸತ್ ಅನರ್ಹತೆ ಬಳಿಕ ನಡೆಯುತ್ತಿರುವ ಕಾರಣ ಪ್ರಾಮುಖ್ಯತೆ ಪಡೆದುಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read