HomeKarnatakaBIG NEWS: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಹೋದರಿ ಸೇರಿ ಐವರ ವಿರುದ್ಧ FIR ದಾಖಲು

BIG NEWS: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಹೋದರಿ ಸೇರಿ ಐವರ ವಿರುದ್ಧ FIR ದಾಖಲು

ಬೆಂಗಳೂರು: ಕೊಲೆಯತ್ನ ನಡೆಸಿದ ಆರೋಪದಡಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಹೋದರಿ ಸೇರಿದಂತೆ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಲಗ್ಗೆರೆಯ ನಿವಾಸಿ ಮಹೇಶ್ ಸಹೋದರ ದೂರು ದಾಖಲಿಸಿದ್ದು, ಕೋಣೆಯೊಳಗೆ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಹೇಶ್ ಹಾಗೂ ಪತ್ನಿ ಶೀಲಾ ನಡುವೆ ಕೌಟುಂಬಿಕ ಕಲಹ ನಡೆದಿತ್ತು. ಇಬ್ಬರ ರಾಜೀಪಂಚಾಯಿತಿ ಮಾಡಲು ಅಖಂಡ ಶ್ರೀನಿವಾಸ್ ಸಹೋದರಿ ಚಂದ್ರಕಲಾ, ಭಾಗ್ಯಮ್ಮ, ಸುನೀತ ಮತ್ತಿತರರು ತೆರಳಿದ್ದರು.

ರಾಜೀಪಂಚಾಯ್ತಿಗೆ ಯತ್ನಿಸಿದ್ದಾರೆ. ಈ ವೇಳೆ ಮಹೇಶ್ ಹಾಗೂ ಪತ್ನಿ ಶಿಲ್ಪಾ ನಡುವೆ ವಾಗ್ವಾದ ಆರಂಭಗೊಂಡಿದೆ. ಈ ವೇಳೆ ಮಹೇಶ್ ನನ್ನು ಕೋಣೆಗೆ ಎಳೆದೊಯ್ದು ಚಂದ್ರಕಲಾ, ಭಾಗ್ಯಮ್ಮ, ಸುನೀತ, ಕಾರು ಚಾಲಕ ಸೇರಿ ಐವರು ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದು, ಗಂಭೀರ ಗಾಯಗಳಾಗಿವೆ ಎಂದು ಮಹೇಶ್ ಸಹೋದರ ರಾಜು ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular