HomeKarnatakaBIG NEWS: ವಿದ್ಯುತ್ ಬಿಲ್ ವಿಚಾರ; ಸ್ಪಷ್ಟನೆ ನೀಡಿದ ಬೆಸ್ಕಾಂ; ಗೊಂದಲಗಳಿದ್ದರೆ ಈ ಕೆಳಗಿನ ಸಹಾಯವಾಣಿಗೆ...

BIG NEWS: ವಿದ್ಯುತ್ ಬಿಲ್ ವಿಚಾರ; ಸ್ಪಷ್ಟನೆ ನೀಡಿದ ಬೆಸ್ಕಾಂ; ಗೊಂದಲಗಳಿದ್ದರೆ ಈ ಕೆಳಗಿನ ಸಹಾಯವಾಣಿಗೆ ಕರೆ ಮಾಡಲು ಮಾಹಿತಿ


ಬೆಂಗಳೂರು: ವಿದ್ಯುತ್ ಬಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಸ್ಪಷ್ಟನೆ ನೀಡಿದೆ. ಜೂನ್ ತಿಂಗಳ ವಿದ್ಯುತ್ ಬಿಲ್ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ.

ಜೂನ್ ನಲ್ಲಿ ಗ್ರಾಹಕರಿಗೆ ನೀಡಿರುವ ಬಿಲ್ಲಿನ ಮಾಹಿತಿಯನ್ನು ತಂತ್ರಾಂಶದಲ್ಲಿ ಸೇರ್ಪಡೆಗೊಳಿಸುವ ಕಾರ್ಯ ಪ್ರಗತಿಯಲ್ಲಿರುವ ಕಾರಣ, ಗ್ರಾಹಕರಿಗೆ ಆನ್ ಲೈನ್ ನಲ್ಲಿ ಋಣಾತ್ಮಕ ಬಿಲ್ ಗಳು ಬಂದಿವೆ. ಇದನ್ನು ಎರಡು ತಿಂಗಳ ಒಳಗಾಗಿ ಸರಿಪಡಿಸಲಾಗುವುದು.

ಬಿಲ್ ಗಳ ಬಗ್ಗೆ ಗ್ರಾಹಕರು ಆತಂಕಕ್ಕೀಡಾಗುವುದು ಬೇಡ. ಯಾವುದೇ ಗೊಂದಲವಿದ್ದರೂ ಸಂಬಂಧಿಸಿದ ಉಪ ವಿಭಾಗಕ್ಕೆ ಭೇಟಿ ನೀಡಿ. ಇಲ್ಲವೇ 1912 ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular