HomeKarnatakaBIG NEWS: ವರುಣಾ ಜನ ಕೇಳಿದ್ರೆ ತಾಲೂಕು ಮಾಡ್ತೀವಿ ಹೊರತು ಬೊಮ್ಮಾಯಿ ಹೇಳಿದ್ರೆ ಅಲ್ಲ ಎಂದ...

BIG NEWS: ವರುಣಾ ಜನ ಕೇಳಿದ್ರೆ ತಾಲೂಕು ಮಾಡ್ತೀವಿ ಹೊರತು ಬೊಮ್ಮಾಯಿ ಹೇಳಿದ್ರೆ ಅಲ್ಲ ಎಂದ ಸಿಎಂ ಸಿದ್ದರಾಮಯ್ಯ

ಮೈಸೂರು: ವರುಣಾ ತಾಲೂಕು ಕೇಂದ್ರ ಮಾಡಬೇಕು ಎಂಬ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ವರುಣಾ ಜನರು ಯಾವತ್ತೂ ತಾಲೂಕು ಕೇಂದ್ರ ಮಾಡಿ ಎಂದು ಕೇಳಿಲ್ಲ ಎಂದಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವರುಣಾ ಕ್ಷೇತ್ರದ ಜನ ಕೇಳಿದರೆ ಮಾತ್ರ ತಾಲೂಕು ಕೇಂದ್ರ ಮಾಡುತ್ತೇವೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರೆ ಮಾಡುವುದಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರುಣಾ ತಾಲೂಕು ಕೇಂದ್ರ ಮಾಡ್ತೀವಿ ಅಂತ ಹೇಳಿದ್ದು ಬಿಜೆಪಿಯವರು. ನನ್ನ ಬಳಿ ಯಾವತ್ತೂ ವರುಣಾ ಜನ ತಾಲೂಕು ಕೇಂದ್ರ ಮಾಡಿ ಎಂದು ಹೇಳಿಲ್ಲ. ಬಿಜೆಪಿಯವರು ಅಧಿಕಾರ ಇದ್ದಾಗ ಅಭಿವೃದ್ಧಿ ಕೆಲಸ ಮಾಡಿಲ್ಲ. ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular