HomeCrimeBIG NEWS: ರೌಡಿ ಶೀಟರ್ ನಿಂದ ಮತ್ತೋರ್ವ ರೌಡಿ ಶೀಟರ್ ಹತ್ಯೆ

BIG NEWS: ರೌಡಿ ಶೀಟರ್ ನಿಂದ ಮತ್ತೋರ್ವ ರೌಡಿ ಶೀಟರ್ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್ ನಿಂದಲೇ ಮತ್ತೋರ್ವ ರೌಡಿಶೀಟರ್ ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕೆ.ಪಿ. ಅಗ್ರಹಾರದ ಮಹದೇಶ್ವರ ಅಗ್ರಹಾರದ ಬಳಿ ರೌಡಿ ಶೀಟರ್ ಸಾಗರ್ ನನ್ನು ರೌಡಿಶೀಟರ್ ನವೀನ್ ಹತ್ಯೆಗೈದಿದ್ದಾನೆ. ವಿಜಯನಗರ ಠಾಣೆಯ ರೌಡಿಶೀಟರ್ ನವೀನ್ ಹಾಗೂ ಸಾಗರ್ ಇಬ್ಬರೂ ರಾತ್ರಿ ಒಟ್ಟಿಗೆ ಕುಳಿತು ಪಾರ್ಟಿ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದೆ.

ಮಾತಿಗೆ ಮಾತು ಬೆಳೆದು ನವೀನ್ ಲಾಂಗ್ ನಿಂದ ಸಾಗರ್ ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular