HomeKarnatakaBIG NEWS: ರಾಜ್ಯ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ HDK

BIG NEWS: ರಾಜ್ಯ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ HDK

ಬೆಂಗಳೂರು: ಈಗಾಗಲೇ ಅಧಿಕಾರಿಗಳ ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ. ಈ ಸರ್ಕಾರದ ವಿರುದ್ಧವೂ ಪೇಸಿಎಂ ಪ್ರಾರಂಭ ಮಾಡಬೇಕಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ ಎಂದು ಅಧಿಕಾರಿಗಳೇ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಇವರು ಪೇಸಿಎಂ ಅಂದ್ರಲ್ಲಾ ಈಗ ಕಾಂಗ್ರೆಸ್ ನವರು ಏನು ಮಾಡ್ತಿದ್ದಾರೆ ? ಇದನ್ನು ಪ್ರೂವ್ ಮಾಡಿ ಎಂದರೆ ಹೇಗೆ ಮಾಡುವುದು ? ಮೊದಲು ಸರ್ಕಾರ ಪರ್ಸಂಟೇಜ್ ವಿಚಾರ ಸ್ಪಷ್ಟ ಮಾಡಲಿ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಷರತ್ತು ಹಾಕಿರುವ ವಿಚಾರವಾಗಿ ಕಿಡಿ ಕಾರಿದ ಹೆಚ್.ಡಿ.ಕೆ. ಹೋಟೆಲ್ ಗಳಲ್ಲಿ ದೋಸೆ ಫ್ರೀ ಅಂತ ಬೋರ್ಡ್ ಹಾಕಿ ಚಟ್ನಿ ಫ್ರೀ ಕೊಡದ ರೀತಿಯ ಕಥೆ ಆಗಿದೆ ಸರ್ಕಾರದ ಯೋಜನೆ ಎಂದು ಟೀಕಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular