BIG NEWS: ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದ ಜನ; ಜನರತ್ತ ಕೈ ಬೀಸುತ್ತ ಸಾಗಿದ ಪ್ರಧಾನಿ ಮೋದಿ; ಮಾರ್ಗದುದ್ದಕ್ಕೂ ಹೂವಿನ ಮಳೆಗರೆದು ಸ್ವಾಗತಿಸಿದ ಕಾರ್ಯಕರ್ತರು

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೇವಲ 4 ದಿನಗಳು ಮಾತ್ರ ಬಾಕಿಯಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಬ್ಬರದ ರೋಡ್ ಶೋ ಆರಂಭವಾಗಿದೆ.

ಜೆ.ಪಿ.ವನಗರದ ಸೋಮೇಶ್ವರ ಭವನದಿಂದ ಆರಂಭವಾಗಿರುವ ರೋಡ್ ಶೋ ಬರೋಬ್ಬರಿ 26.5 ಕಿ.ಮೀ ವರೆಗೆ ಸಾಗಲಿದೆ. ರೋಡ್ ಶೋ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ನೆರೆದಿದ್ದು, ಮೋದಿ ಮೋದಿ ಎಂದು ಜಯಘೋಷ ಕೂಗುತ್ತಿದ್ದಾರೆ.

ಪ್ರಧಾನಿ ಮೋದಿ ಸಾಗುವ ಮಾರ್ಗದುದ್ದಕ್ಕೂ ಹೂಮಳೆಗರೆದು ಜನರು ಆತ್ಮೀಯವಾಗಿ ಪ್ರಧಾನಿಯವರನ್ನು ಬರಮಾಡಿಕೊಳ್ಳುತ್ತಿದ್ದಾರೆ. ತೆರೆದ ವಾಹನದಲ್ಲಿ ನಿಂತು ಪ್ರಧಾನಿ ಮೋದಿ ಜನರತ್ತ ಕೈ ಬೀಸುತ್ತಾ ಸಾಗಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ರಸ್ತೆಗಳು ಸಂಪೂರ್ಣ ಕೇಸರಿಮಯವಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read