
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಕಲಾವಿದರು ತಮಗೆ ಬೇಕಾದವರನ್ನು ಚುನಾವಣೆಯಲ್ಲಿ ಬೆಂಬಲಿಸುತ್ತಾರೆ. ಸರ್ಕಾರ ಸಿನಿಮಾ ನಟರ ಮೇಲೆ ಒತ್ತಡ ಹಾಕಿರಬಹುದು ಅಥವಾ ನಟರ ಬಳಿ ಮನವಿ ಮಾಡಿಕೊಂಡಿರಬಹುದು ಎಂದು ಹೇಳಿದರು.
ಇದೇ ವೇಳೆ ಈ ಹಿಂದೆ ನಟ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿದ್ದ ವಿಷಯವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ನಾನು ಹಾಗೂ ಸುದೀಪ್ ಹಳೇ ಸ್ನೇಹಿತರು. ರಾಜಕೀಯ ಉದ್ದೇಶದಿಂದ ನಾನು ಸುದೀಪ್ ಅವರನ್ನು ಭೇಟಿಯಾಗಿಲ್ಲ. ರಾಜಕೀಯ ಚರ್ಚೆ ಕೂಡ ನಡೆದಿಲ್ಲ ಎಂದು ಹೇಳಿದರು.

