BIG NEWS: ಬ್ಯಾಂಕ್ ನಿಂದ ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಸ್ವಾಧೀನ; ಹರಾಜಿಗೂ ಮುನ್ನ ಬೆಂಬಲಿಗರ ಹೈಡ್ರಾಮಾ

ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ವಸ್ತುಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ಅವರ ಮನೆಯನ್ನು ಕೋರ್ಟ್ ಆದೇಶದಂತೆ ಬ್ಯಾಂಕ್ ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಸ್ವಾಧೀನಪಡಿಸಿಕೊಂಡ ಮನೆಯನ್ನು ಇನ್ನು ಮೂರು ದಿನಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಹರಾಜು ಹಾಕಲಿದ್ದಾರೆ. ಈ ಮಧ್ಯೆ ಬೇಳೂರು ರಾಘವೇಂದ್ರ ಕಡೆಯವರು ಬ್ಯಾಂಕ್ ಸೀಲ್ ಮಾಡಿದ್ದ ಮನೆಯ ಬೀಗ ಒಡೆದು ಅಕ್ರಮವಾಗಿ ಮನೆಯ ಒಳಗೆ ಪ್ರವೇಶ ಮಾಡಿದ್ದಾರೆ. ಅವರನ್ನು ಹೊರ ಹಾಕಲು ಯತ್ನಿಸಿದಾಗ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಬೇಳೂರು ರಾಘವೇಂದ್ರ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5 ಕೋಟಿಗೂ ಅಧಿಕ ಸಾಲ ಪಡೆದಿದ್ದು, ಮೂರು ವರ್ಷಗಳಿಂದ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿರುವ ಎಸ್ ಎಂ ಸಿ ಬೆವೆರ್ಲಿ ಅಪಾರ್ಟ್ ಮೆಂಟ್ ಪ್ಲಾಟ್ ನ್ನು ಬ್ಯಾಂಕ್ ವಶಕ್ಕೆ ನೀಡಿ ಕಳೆದ ಡಿಸೆಂಬರ್ ನಲ್ಲಿ ಕೋರ್ಟ್ ಆದೇಶ ನೀಡಿತ್ತು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read