 ಬೆಂಗಳೂರು: ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ಕಿಚ್ಚ ಸುದೀಪ್, ಇಂತಹ ಬೆದರಿಕೆಗಳಿಗೆಲ್ಲ ನಾನು ಹೆದರಲ್ಲ. ಈ ಬೆದರಿಕೆಗೆ ನಾನು ಉತ್ತರ ಕೊಟ್ಟೆ ಕೊಡ್ತೇನೆ. ಆದರೆ ಈಗ ಈ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಸುದೀಪ್, ಬೆದರಿಕೆ ಪತ್ರ ಬರೆದವರು ರಾಜಕೀಯದವರಲ್ಲ. ಖಂಡಿತ ಚಿತ್ರರಂಗದಲ್ಲಿರುವವರೇ ಮಾಡಿರುವ ಕೆಲಸವಿದು. ಚಿತ್ರರಂಗದಲ್ಲಿ ನನ್ನ ಕಂಡರೆ ಆಗದವರು ಕೆಲವರು ಇದ್ದಾರೆ. ಬೆದರಿಕೆ ಪತ್ರ ಬರೆದವರು ಯಾರು ಅಂತ ಗೊತ್ತಿದೆ. ಈಗ ಅವರ ಬಗ್ಗೆ ಮಾತನಾಡಲ್ಲ ಎಂದರು.
ಮುಂದೆ ಅವರಿಗೆ ಹೇಗೆ ಉತ್ತರ ಕೊಡಬೇಕೋ ಹಾಗೆ ಕೊಡುತ್ತೇನೆ. ಅಡ್ರೆಸ್ ಗೊತ್ತಿದೆ ಎಂದ ಮಾತ್ರಕ್ಕೆ ಪತ್ರ ಬರೆದು ಬೆದರಿಕೆ ಹಾಕುವುದಲ್ಲ. ಅವರಿಗೆ ಅವರ ಮಾರ್ಗದಲ್ಲೇ ಉತ್ತರ ಕೊಡುತ್ತೇನೆ. ಇದನ್ನು ಸುಮ್ಮನೇ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

		 Loading ...
 Loading ... 