BIG NEWS: ಬಿಬಿಎಂಪಿ ಅಧಿಕಾರಿಗಳಿಗೆ ಮೊದಲ ಟಾಸ್ಕ್ ಕೊಟ್ಟ ಡಿಸಿಎಂ

ಬೆಂಗಳೂರಿನ ಯಾವ ರಸ್ತೆಗಳಲ್ಲಿ ಮರಗಳಿಲ್ಲ ಎಂಬುದನ್ನು ಬಿಬಿಎಂಪಿ ತಕ್ಷಣ ವರದಿ ಸಿದ್ದಪಡಿಸಿ ಸಲ್ಲಿಸಬೇಕು. ಅಂತಹ ರಸ್ತೆಗಳಲ್ಲಿ ಸ್ಥಳೀಯ ಶಾಲಾ ಮಕ್ಕಳಿಂದ ಗಿಡ ನೆಡಿಸಿ, ಆ ಗಿಡವನ್ನು ಬೆಳೆಸುವ ಜವಾಬ್ದಾರಿಯನ್ನು ಆ ಮಕ್ಕಳಿಗೇ ನೀಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಶಾಲಾ ಮಕ್ಕಳಿಂದ ಗಿಡ ನೆಡಿಸಿ, ಗಿಡಗಳಿಗೆ ಬೇಕಾಗುವ ರಕ್ಷಾ ಪಂಜರಗಳನ್ನು ಪಾಲಿಕೆ ನೀಡಬೇಕು. ಆ ಗಿಡಕ್ಕೆ ಆ ಮಕ್ಕಳ ಹೆಸರು ಹಾಕಿಕೊಳ್ಳಲು ಅವಕಾಶ ನೀಡಬೇಕು. ಆ ಗಿಡವನ್ನು ಆ ಮಗು ಬೆಳೆಸಬೇಕು. ಈ ವಿಚಾರದಲ್ಲಿ ಮಕ್ಕಳಲ್ಲಿ ಸ್ಪರ್ಧೆ ಏರ್ಪಡಿಸಿ. ಆಗ ಮಕ್ಕಳು ಸಂತೋಷದಿಂದ ಗಿಡ, ಮರ ಬೆಳೆಸಲು ಆಸಕ್ತಿ ತೋರುತ್ತಾರೆ. ಮಕ್ಕಳನ್ನು ಸಾಕುವಂತೆ ಮರ ಗಿಡಗಳನ್ನು ಬೆಳೆಸಬೇಕು. ಆಗ ಪರಿಸರ ದಿನಕ್ಕೆ ಅರ್ಥ ಬರುತ್ತದೆ. ಈ ಬಗ್ಗೆ ಒಂದು ಯೋಜನೆ ರೂಪಿಸಬೇಕು ಇದು ಪಾಲಿಕೆ ಅಧಿಕಾರಿಗಳಿಗೆ ನಾನು ನೀಡುತ್ತಿರುವ ಮೊದಲನೆಯ ಟಾಸ್ಕ್ ಎಂದು ಹೇಳಿದ್ದಾರೆ.

ಮನುಷ್ಯನ ಬದುಕು ಪರಿಸರದ ಜತೆಗೆ ಬೆಸೆದುಕೊಂಡಿದೆ. ಮನುಷ್ಯ ತನ್ನ ಬದುಕಿನ ಪ್ರತಿ ಹಂತದಲ್ಲಿ ಪರಿಸರವನ್ನು ಉಳಿಸಿಕೊಂಡರೆ ಮಾತ್ರ ಆರೋಗ್ಯಕರ ಜೀವನ ನಡೆಸಬಹುದು. ವಿಶ್ವ ಪರಿಸರ ದಿನ ಕೇವಲ ಸಂಕೇತ ಮಾತ್ರ. ನಾವು ಪ್ರತಿನಿತ್ಯ ಪರಿಸರ ಸಂರಕ್ಷಣೆ ಮಾಡಬೇಕು. ಆಗ ಮಾತ್ರ ಪರಿಸರಕ್ಕೆ ಶಕ್ತಿ ತುಂಬಲು ಸಾಧ್ಯ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read