BIG NEWS: ಬಿಜೆಪಿ- ಕಾಂಗ್ರೆಸ್ ಕ್ರೆಡಿಟ್ ವಾರ್ ಗೆ ಎರಡು ಬಾರಿ ಉದ್ಘಾಟನೆಗೊಂಡ ಶಿವಾಜಿ ಪ್ರತಿಮೆ; ಮೂರ್ತಿ ಶುದ್ಧೀಕರಣಕ್ಕೆ ಮುಂದಾದ MES

ಬೆಳಗಾವಿ: ರಾಜಹಂಸಗಡ ಕೋಟೆಯಲ್ಲಿ ನಿರ್ಮಾಣಗೊಂಡಿದ್ದ ಶಿವಾಜಿ ಪ್ರತಿಮೆ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಡಿವಿನ ಪ್ರತಿಷ್ಠೆಯ ಫೈಟ್ ನಿಂದಾಗಿ ಎರಡು ಬಾರಿ ಉದ್ಘಟನೆಗೊಂಡಿದ್ದಾಗಿದೆ. ಈಗ ಕ್ರೆಡಿಟ್ ಫೈಟ್ ಗೆ ಎಂಇಎಸ್ ಕೂಡ ಎಂಟ್ರಿ ಕೊಟ್ಟಿದ್ದು, ಪ್ರತಿಮೆ ಶುದ್ಧೀಕರಣ ಮಾಡಲು ಮುಂದಾಗಿದೆ.

ಶಿವಾಜಿ ಮಹಾರಾಜರ ಪ್ರತಿಮೆಯನ್ನು ಎರಡೂ ರಾಜಕೀಯ ಪಕ್ಷಗಳು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿವೆ ಎಂದು ಆರೋಪಿಸಿ ಮಾರ್ಚ್ 19ರಂದು ಶಿವಾಜಿ ಪ್ರತಿಮೆ ಶುದ್ಧಗೊಳಿಸಲು ಮುಂದಾಗಿದೆ.

ಪ್ರತಿಮೆ ಶುದ್ಧೀಕರಣ ಅಂಗವಾಗಿ ಪಾದಪೂಜೆ, ಪಂಚಾಮೃತ ಅಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಹಾರಾಷ್ಟ್ರದ ವಿವಿಧ ಕೋಟೆಗಳಿಂದ ಶಿವಜ್ಯೋತಿ ತಂದು ಮೆರವಣಿಗೆ ಮಾಡಲು ಸಿದ್ಧತೆ ನಡೆಸಲಾಗಿದೆ. ಬಳಿಕ ಮೆರವಣಿಗೆ ರಾಜಹಂಸಗಡ ಕೋಟೆಗೆ ತೆರಳಲಿದೆ. ಈ ಮೂಲಕವಾಗಿ ಎಂಇಎಸ್ ಬೆಳಗಾವಿಯಲ್ಲಿ ಮತಬೇಟೆಗೆ ಸಜ್ಜಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read