HomeKarnatakaBIG NEWS: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಯುಪಿ ಮಾದರಿ ಜಾರಿ; ಹಿಂದೂಗಳು, ದೇಶದ ಬಗ್ಗೆ ಮಾತಾಡಿದ್ರೆ...

BIG NEWS: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಯುಪಿ ಮಾದರಿ ಜಾರಿ; ಹಿಂದೂಗಳು, ದೇಶದ ಬಗ್ಗೆ ಮಾತಾಡಿದ್ರೆ ಎನ್ ಕೌಂಟರ್; ಎಚ್ಚರಿಕೆ ನೀಡಿದ ಯತ್ನಾಳ್

ಹುಬ್ಬಳ್ಳಿ: ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ನಾಯಕ ವಾಕ್ಸಮರ ತಾರಕಕ್ಕೇರಿದ್ದು, ಹಿಂದೂಗಳ ಹಾಗೂ ದೇಶದ ವಿರುದ್ಧ ಮಾತನಾಡುವವರಿಗೆ ಎನ್ ಕೌಂಟರ್ ಮಾಡುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ಕುಂದಗೋಳದ ಹಿರೇಹರಕುಣಿ ಗ್ರಾಮದಲ್ಲಿ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾದರಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಹಿಂದುಗಳು ಹಾಗೂ ದೇಶದ ವಿರುದ್ಧ ಯಾರಾದರೂ ಮಾತನಾಡಿದರೆ ಢಂಢಂ ಖಚಿತ, ಕುಂಯ್ ಕುಂಯ್ ಅಂದರೆ ಎನ್ ಕೌಂಟರ್ ನಿಶ್ಚಿತ. ರೋಡ್ ಮೇಲೇಯೇ ಡಿಷ್ಕ್ಯಾಂ…ಅಂತ ಹೇಳಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular