BIG NEWS: ಬಹುಮತದ ಕೊರತೆಯಾಗಲ್ಲ; ಆದರೂ ಜೆಡಿಎಸ್ ಬೆಂಬಲ ಕೊಟ್ರೆ ಒಳ್ಳೆಯದಾಗತ್ತೆ ಎಂದ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ

ಬೆಳಗಾವಿ: ಮೈತ್ರಿಗೆ ನಾವು ಸಿದ್ಧ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ, ನಮ್ಮ ಲೆಕ್ಕಾಚಾರದ ಪ್ರಕಾರ ಬಹುಮತದ ಕೊರತೆಯಾಗಲ್ಲ, ಆದರೂ ಅವರು ಬೆಂಬಲ ಕೊಟ್ಟರೆ ಒಳ್ಳೆಯದೆ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಆದರೆ ಜೆಡಿಎಸ್ ಬೆಂಬಲ ಕೊಟ್ಟರೆ ಒಳ್ಳೆಯ ಸರ್ಕಾರ ರಚಿಸಿ ಆಡಳಿತ ಮಾಡಲು ಒಳ್ಳೆಯದಾಗುತ್ತದೆ. ದೇವೇಗೌಡರು, ಕುಮಾರಸ್ವಾಮಿಯವರ ಸಲಹೆ ಇದ್ದರೆ ಒಳ್ಳೆಯದೇ ಎಂದು ಹೇಳಿದರು.

ಬಿಜೆಪಿಯವರು ಆಪರೇಷನ್ ಕಮಲ ಮಾಡೋದು ಹಗಲುಗನಸು. ಪ್ರತಿಬಾರಿಯೂ ಆಪರೇಷನ್ ಕಮಲ ಸಕ್ಸಸ್ ಆಗಲ್ಲ. ಅತಂತ್ರ ಫಲಿತಾಂಶ ನೂರಕ್ಕೆ ನೂರಷ್ಟು ಬರಲ್ಲ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read