BIG NEWS: ಪ್ರಯಾಣಿಕರ ಗಮನಕ್ಕೆ; ಮೆಟ್ರೋ ಸಂಚಾರದಲ್ಲಿ 1 ತಿಂಗಳು ವ್ಯತ್ಯಯ

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿ. ಬರೋಬ್ಬರಿ ಒಂದು ತಿಂಗಳ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯವಾಗಲಿದೆ ಎಂದು ಬಿ ಎಂ ಆರ್ ಸಿ ಎಲ್ ತಿಳಿಸಿದೆ.

ಜುಲೈ 10ರಿಂದ ಆಗಸ್ಟ್ 9ರವರೆಗೆ ಪ್ರತಿ ದಿನ 2 ತಾಸು ಮೆಟ್ರೋ ಸಂಚಾರ ಬಂದ್ ಆಗಿರುತ್ತದೆ. ಬೈಯ್ಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳ ನಡುವಿನ ಮೆಟ್ರೋ ಸಿಗ್ನಲ್ ಹಾಗೂ ಇತರ ಕಾಮಗಾರಿಗಳಿರುವುದರಿಂದ ಒಂದು ತಿಂಗಳ ಕಾಲ ಸಂಚಾರ ಈ ಮಾರ್ಗದಲ್ಲಿ ಬಂದ್ ಆಗಲಿದೆ.

ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read