BIG NEWS: ಪ್ರಧಾನಿ ಮೋದಿ ಬರಿ ಬುರುಡೆ ಭಾಷಣ ಮಾಡಿ ಹೋಗ್ತಾರೆ; ಮಾಜಿ ಸಿಎಂ HDK ವ್ಯಂಗ್ಯ

ಬೆಂಗಳೂರು: ಜನರ ಒಳಿತಿಗಾಗಿ ಸರ್ಪ ಆಗಲು ಸಿದ್ಧ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸರ್ಪ ಯಾವಾಗಲೂ ಡೇಂಜರ್ ಎಂದು ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸರ್ಪ, ವಿಷಕನ್ಯೆ ಬಗ್ಗೆ ಚರ್ಚೆ ಮಾಡಲು ನಾನು ಹೋಗಲ್ಲ. ಇವತ್ತಿನ ರಾಜಕಾರಣದಲ್ಲಿ ಇವೆಲ್ಲ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಇಲ್ಲಿಗೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಮೋದಿ ಬರಿ ಬುರುಡೆ ಭಾಷಣ ಮಾಡಿ ಹೋಗ್ತಿದ್ದಾರೆ. ಈ ಡಬಲ್ ಇಂಜಿನ್ ಸರ್ಕಾರವೇ ಲೂಟಿ ಮಾಡುವುದು. ಅನಗತ್ಯವಾಗಿ ವಿಪಕ್ಷಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read