
ಚಾಮರಾಜನಗರ ಜಿಲ್ಲೆಯ ಕೋಡಿಮಳೆ ಗ್ರಾಮದಲ್ಲಿ ಸಚಿವ ಸೋಮಣ್ಣ ಪ್ರಚಾರಕ್ಕೆ ತೆರಳಿದ್ದ ವೇಳೆ ಬಿಸಿಲ ಝಳ, ಲೋ ಬಿಪಿಯಿಂದಾಗಿ ತಲೆ ಸುತ್ತಿ ಕುಸಿದ ಘಟನೆ ನಡೆದಿದೆ.
ತಕ್ಷಣ ಬೆಂಬಲಿಗರು ಗ್ರಾಮದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಚೇತರಿಸಿಕೊಂಡ ಬಳಿಕ ಸಚಿವರು ಮತ್ತೆ ಚುನಾವಣಾ ಪ್ರಚಾರ ಮುಂದುವರೆಸಿದ್ದಾರೆ.

