HomeInternationalBIG NEWS:‌ ಪಾಕಿಸ್ತಾನದಲ್ಲಿದೆ ವಾಸಕ್ಕೆ ಯೋಗ್ಯವೇ ಅಲ್ಲದ ಈ ನಗರ…!

BIG NEWS:‌ ಪಾಕಿಸ್ತಾನದಲ್ಲಿದೆ ವಾಸಕ್ಕೆ ಯೋಗ್ಯವೇ ಅಲ್ಲದ ಈ ನಗರ…!

ಭಾರತದೊಂದಿಗೆ ಹಗೆತನ ಹೊಂದಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನಕ್ಕೊಳಗಾಗಿದೆ. ವಾಸ್ತವವಾಗಿ ಪಾಕಿಸ್ತಾನದ ಪ್ರಸಿದ್ಧ ನಗರವೊಂದು ಈಗ ಜಗತ್ತಿನಲ್ಲಿ ಯಾರೂ ವಾಸಿಸಲು ಇಷ್ಟಪಡದ ಸಿಟಿ ಎನಿಸಿಕೊಂಡಿದೆ. ಈ ನಗರ ಪಾಕಿಸ್ತಾನದ ಆರ್ಥಿಕ ರಾಜಧಾನಿ ಎಂದು ಕರೆಯಲ್ಪಡುವ ಕರಾಚಿ. ಪಾಕಿಸ್ತಾನದ ಅತ್ಯಂತ ಆಧುನಿಕ ನಗರ ಕರಾಚಿ. ಆದ್ರೀಗ ಇದು ವಾಸಕ್ಕೆ ಯೋಗ್ಯವಲ್ಲ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ.

ಪಾಕಿಸ್ತಾನದ ಕರಾವಳಿ ನಗರ ಕರಾಚಿಗೆ, ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU), ವಿಶ್ವದ ಅಗ್ರ ಐದು ‘ಕಡಿಮೆ ವಾಸಯೋಗ್ಯ’ ನಗರ ಕೇಂದ್ರಗಳಲ್ಲಿ ಸ್ಥಾನ ನೀಡಿದೆ. EIU ನ ಗ್ಲೋಬಲ್ ಲೈವ್‌ಬಿಲಿಟಿ ಇಂಡೆಕ್ಸ್ 2023 ರಲ್ಲಿ, ಕರಾಚಿ 173 ನಗರಗಳಲ್ಲಿ 169 ನೇ ಸ್ಥಾನದಲ್ಲಿದೆ. ಅದನ್ನು ಬಿಟ್ಟರೆ  ಲಾಗೋಸ್, ಅಲ್ಜೀರ್ಸ್, ಟ್ರಿಪೋಲಿ ಮತ್ತು ಡಮಾಸ್ಕಸ್ ನಂತರದ ಸ್ಥಾನದಲ್ಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚುನಾವಣೆ ಹೇಗೆ ನಡೆಯುತ್ತದೆ ?

EIUನ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗವು ತನ್ನ ಸಮೀಕ್ಷೆ – ವಿಶ್ಲೇಷಣೆಯ ಮೂಲಕ ಸಲಹಾ ಸೇವೆಯನ್ನು ಒದಗಿಸುತ್ತದೆ. ಸೂಚ್ಯಂಕವು ಪ್ರಪಂಚದಾದ್ಯಂತದ ನಗರಗಳಲ್ಲಿ ಕೋವಿಡ್ ನಂತರದ ಚೇತರಿಕೆಯನ್ನು ಕೇಂದ್ರೀಕರಿಸಿದೆ. ಸ್ಥಿರತೆ, ಆರೋಗ್ಯ ರಕ್ಷಣೆ, ಸಂಸ್ಕೃತಿ ಮತ್ತು ಪರಿಸರ, ಶಿಕ್ಷಣ ಮತ್ತು ಮೂಲಸೌಕರ್ಯ ಸೇರಿದಂತೆ ಐದು ವರ್ಗಗಳ ಆಧಾರದ ಮೇಲೆ ಜೀವನ ಪರಿಸ್ಥಿತಿಗಳನ್ನು ಮೌಲ್ಯಮಾಪನ ಮಾಡುತ್ತದೆ.

ಕರಾಚಿ ನಗರವು ಈ ಎಲ್ಲಾ ನಿಯತಾಂಕಗಳಲ್ಲಿ ವಿಫಲವಾಗಿದೆ. ಕರಾಚಿಯ ಒಟ್ಟು ಸ್ಕೋರ್ 42.5 ಎಂದು ಹೇಳಲಾಗುತ್ತಿದೆ. ಇದು ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆಯಾಗಿದೆ. ಕರೋನಾ ಅವಧಿಯ ನಂತರ ಇಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ಈ ನಗರವು ಆರೋಗ್ಯ ಸೇವೆಗಾಗಿ 50, ಶಿಕ್ಷಣಕ್ಕಾಗಿ 70 ಮತ್ತು ಮೂಲಸೌಕರ್ಯಕ್ಕಾಗಿ 51.8 ಸ್ಕೋರ್‌ ಪಡೆದುಕೊಂಡಿದೆ. 2019 ರಲ್ಲೂ ಕರಾಚಿ ವಾಸಕ್ಕೆ ಅಯೋಗ್ಯ ನಗರ ಎನಿಸಿಕೊಂಡಿತ್ತು. ಆಗ ಸೂಚ್ಯಂಕದಲ್ಲಿ 140 ನಗರಗಳ ಪೈಕಿ 136ನೇ ಸ್ಥಾನದಲ್ಲಿತ್ತು.

 

 

 

For Latest News Updates, Join Our Whatsapp Community🚩
RELATED ARTICLES

Most Popular