BIG NEWS: ಪಕ್ಕದ ಮನೆಯಲ್ಲಿ ಗಂಡು ಹಡೆದರೆ ಪೇಡ ಕೊಡ್ತಾರೆ; ದಶಪಥ ರಸ್ತೆ ವಿಚಾರವಾಗಿ ವಿಪಕ್ಷಗಳಿಗೆ ಸಿಎಂ ತಿರುಗೇಟು

ಮಂಡ್ಯ: ಪ್ರಧಾನಿ ಮೋದಿಯವರನ್ನು ವಿಶ್ವ ನಾಯಕ ಎಂದು ಕರೆಯಲಾಗುತ್ತಿದೆ. ಪಾಕಿಸ್ತಾನ, ಚೀನಾ ನಾಗರಿಕರಿಗೂ ಪ್ರಧಾನಿ ಮೋದಿ ಮೆಚ್ಚುಗೆಯಾಗಿದ್ದಾರೆ. ಮೋದಿ ರೀತಿಯ ನಾಯಕ ಬೇಕು ಎನ್ನುತ್ತಿದ್ದಾರೆ ಪಾಕಿಸ್ತಾನದ ಜನತೆ. ಅಮೆರಿಕಾ ಪ್ರಜೆಗಳಿಂದಲೂ ಮೋದಿಯವರಿಗೆ ಬಹುಪರಾಕ್ ಹೇಳಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ.

ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಲೊಕಾರ್ಪಣೆ ಬಳಿಕ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪಕ್ಕದ ಮನೆಯಲ್ಲಿ ಗಂಡು ಹಡೆದರೆ ಪೇಡ ಕೊಡ್ತಾರೆ. ಕೆಲವರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳುವ ಮೂಲಕ ದಶಪಥ ರಸ್ತೆ ನಾವು ಮಾಡಿದ್ದು ಎನ್ನುವ ವಿಪಕ್ಷಗಳಿಗೆ ತಿರುಗೇಟು ನೀಡಿದರು.

ಪೇಪರ್ ನಲ್ಲಿ ಆಡ್ ಕೊಟ್ಟು ರಸ್ತೆ ನಾವು ಮಾಡಿದ್ದು ಎಂದರು ಎಂದು ಕಾಂಗ್ರೆಸ್-ಜೆಡಿಎಸ್ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಇದು ಪ್ರಧಾನಿ ಮೋದಿ ಮಾಡಿಸಿದ ರಸ್ತೆ. ಡಬಲ್ ಎಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಂಡ್ಯದ ಮೈಶುಗರ್ ಕಾರ್ಖಾನೆ ಪುನರಾರಂಭ ಮಾಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಬಿಜೆಪಿಯಿಂದ ಮಾತ್ರ ಜನರ ಹಾಗೂ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read