HomeKarnatakaBIG NEWS: ನಾನು ಮುಖ್ಯಮಂತ್ರಿಯಾಗಲು ಹೋರಾಟ ಮಾಡುತ್ತಿಲ್ಲ; ಮತ್ತೆ ಕಣ್ಣೀರಿಟ್ಟ ಮಾಜಿ ಸಿಎಂ HDK

BIG NEWS: ನಾನು ಮುಖ್ಯಮಂತ್ರಿಯಾಗಲು ಹೋರಾಟ ಮಾಡುತ್ತಿಲ್ಲ; ಮತ್ತೆ ಕಣ್ಣೀರಿಟ್ಟ ಮಾಜಿ ಸಿಎಂ HDK

ತುಮಕೂರು: ಬಡವರು, ಮಹಿಳೆಯರು, ಅಂಗವಿಕಲರಿಗೆ ಶಕ್ತಿ ತುಂಬಲು ನಾನು ಹೋರಾಡುತ್ತಿದ್ದೇನೆ ಹೊರತು ಮುಖ್ಯಮಂತ್ರಿ ಹುದ್ದೆಗಾಗಿ ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿಯಾಗಬೇಕೆಂದು ಹೋರಾಟ ನಡೆಸಿಲ್ಲ, ಅಂಗವಿಕಲರು, ಅಸಹಾಯಕರು, ಬಡವರಿಗೆ ಶಕ್ತಿ ತುಂಬಲು ಹೋರಾಡುತ್ತಿದ್ದೇನೆ. ನಿತ್ಯವೂ ಬಡ ತಾಯಂದಿರು ಕುಟುಂಬದ ನೋವು ಹೇಳಿಕೊಳ್ಳುತ್ತಿದ್ದಾರೆ. ಅವರ ನೋವಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕಿದೆ ಎಂದರು.

ನಾನು ದೊಡ್ಡ ಶಾಲೆ, ಇಂಡಸ್ಟ್ರೀಸ್, ಕಾಂಪ್ಲೆಕ್ಸ್ ಕಟ್ಟಿಕೊಂಡಿಲ್ಲ. ನಾವು ಮಣ್ಣಿನ ಮಕ್ಕಳು. ಅದರಲ್ಲೇ ದುಡಿಯಬೇಕು. ಚಿತ್ರರಂಗದ ವಿತರಕನಾಗಿದ್ದಾಗ ಬಂದ ಹಣದಿಂದ ಜಮೀನು ಖರೀದಿ ಮಾಡಿದ್ದೇನೆ. ಆ ಹಣದಲ್ಲಿ 40 ಎಕರೆ ಜಮೀನು ಖರೀದಿಸಿದ್ದೇನೆ. ರಾಜಕೀಯದಿಂದ ನಾನು ಹಣ ಮಾಡಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ನಿಮ್ಮನ್ನು ಮೋಸ ಮಾಡಲು ಕಣ್ಣೀರಿಡುತ್ತಿಲ್ಲ, ನಮ್ಮ ತಂದೆಗೆ ಈ ಸ್ಥಿತಿ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಹೇಳುತ್ತಾ ಮತ್ತೆ ಭಾವುಕರಾದರು.

For Latest News Updates, Join Our Whatsapp Community🚩
RELATED ARTICLES

Most Popular