
ನಮ್ಮ ಸರ್ಕಾರದವಿದ್ದ ವೇಳೆ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರನ್ನು ರಾಜೀನಾಮೆ ಕೊಡಿಸಿ ಬಿಜೆಪಿಗೆ ಕರೆತರಲಾಯಿತು. ಅವರು ಪಕ್ಷಕ್ಕೆ ಬರುತ್ತಿದ್ದಂತೆ ತಮಿಳುನಾಡು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ಜೊತೆಗೆ ಕರ್ನಾಟಕ ವಿಧಾನಸಭಾ ಚುನಾವಣೆಗೆ ಉಸ್ತುವಾರಿಯನ್ನಾಗಿಯೂ ನೇಮಿಸಲಾಯಿತು ಎಂದು ಶೆಟ್ಟರ್ ಹೇಳಿದರು.
ಸಭೆಯಲ್ಲಿ ಅಣ್ಣಾಮಲೈ ಅವರಿಗೆ ಕರ್ನಾಟಕ ವಿಧಾನಸಭಾ ಕ್ಷೇತ್ರದ ರಾಜಕೀಯ ಪರಿಸ್ಥಿತಿಯ ಅರಿವೇ ಇರಲಿಲ್ಲ. ಚುನಾವಣಾ ವೀಕ್ಷಕರಾದ ಕಾರಣ ಅವರು ಮುಂದಿನ ಸಾಲಿನಲ್ಲಿ ಕುಳಿತರೆ ನಾವು ಹಿಂದಿನ ಸಾಲಿನಲ್ಲಿ ಕೂರಬೇಕಾಗಿತ್ತು. ಅಣ್ಣಾಮಲೈ ಸಭೆಗಳಲ್ಲಿ ಯಾವುದೇ ಮಾತನಾಡುತ್ತಿರಲಿಲ್ಲ ಅಂತಹ ವ್ಯಕ್ತಿ ಈಗ ಬಿಜೆಪಿಯ ಪ್ರಮುಖ ನಾಯಕ ಎಂದು ವ್ಯಂಗ್ಯವಾಡಿದರು.

