HomeKarnatakaBIG NEWS: ನಂದಿ ಬೆಟ್ಟದಲ್ಲಿ ಟ್ರಕಿಂಗ್ ಗೆ ಹೋಗಿ ಪ್ರಪಾತಕ್ಕೆ ಬಿದ್ದ ಇಬ್ಬರು ಯುವಕರು

BIG NEWS: ನಂದಿ ಬೆಟ್ಟದಲ್ಲಿ ಟ್ರಕಿಂಗ್ ಗೆ ಹೋಗಿ ಪ್ರಪಾತಕ್ಕೆ ಬಿದ್ದ ಇಬ್ಬರು ಯುವಕರು

ಚಿಕ್ಕಬಳ್ಳಾಪುರ: ವೀಕೆಂಡ್ ಹಿನ್ನೆಲೆಯಲ್ಲಿ ಟ್ರಕಿಂಗ್ ಗೆ ನಂದಿಬೆಟ್ಟಕ್ಕೆ ಹೋಗಿದ್ದ ಯುವಕರು ಪ್ರಪಾತಕ್ಕೆ ಬಿದ್ದು ರಕ್ಷಣೆಗಾಗಿ ಮೊರೆಯಿಟ್ಟ ಘಟನೆ ನಡೆದಿದೆ.

ದೊಡ್ದಬಳ್ಳಾಪುರ ಮೂಲದ ಮನೋಜ್ ಕುಮಾರ್ ಹಾಗೂ ಮಂಜುನಾಥ್ ಎಂಬ ಇಬ್ಬರು ಯುವಕರು ನಂದಿಗಿರಿಧಾಮಕ್ಕೆ ತೆರಳಿ ಟ್ರಕಿಂಗ್ ಗೆ ಹೋಗಿದ್ದಾರೆ. ಈ ವೇಳೆ ಪ್ರಪಾತಕ್ಕೆ ಬಿದ್ದಿದ್ದು, ವೀರಭದ್ರೇಶ್ವರ ದೇವಸ್ಥಾನದ ಇಳಿಜಾರಿನಲ್ಲಿ ಸಿಲುಕಿಕೊಂಡಿದ್ದಾರೆ.

ತಕ್ಷಣ ರಕ್ಷಣೆಗಾಗಿ 112ಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯುವಕರನ್ನು ರಕ್ಷಿಸಿದ್ದಾರೆ. ಮನೋಜ್ ಎಂಬ ಯುವಕನಿಗೆ ಗಾಯಗಳಾಗಿದ್ದು, ಚಿಕ್ಕಬಳ್ಳಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular