HomeKarnatakaBIG NEWS: ಜಪ್ತಿ ಮಾಡಿದ್ದ ಸಾರಾಯಿ ಬಾಕ್ಸ್ ಅಧಿಕಾರಿ, ಸಿಬ್ಬಂದಿಗಳಿಂದಲೇ ಕಳ್ಳತನ; ಐವರ ವಿರುದ್ಧ FIR

BIG NEWS: ಜಪ್ತಿ ಮಾಡಿದ್ದ ಸಾರಾಯಿ ಬಾಕ್ಸ್ ಅಧಿಕಾರಿ, ಸಿಬ್ಬಂದಿಗಳಿಂದಲೇ ಕಳ್ಳತನ; ಐವರ ವಿರುದ್ಧ FIR

ಬೆಳಗಾವಿ: ಜಪ್ತಿ ಮಾಡಿದ್ದ ಸಾರಾಯಿ ಬಾಕ್ಸ್ ಗಳನ್ನು ಅಧಿಕಾರಿ, ಸಿಬ್ಬಂದಿಗಳೇ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

753 ಸಾರಾಯಿ ಬಾಕ್ಸ್ ಗಳನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಅವುಗಳಲ್ಲಿ 301 ಬಾಕ್ಸ್ ಗಳನ್ನು ಅಧಿಕಾರಿಗಳು, ಸಿಬ್ಬಂದಿಗಳು ಕದ್ದಿದ್ದು, ಜಿಲ್ಲೆಯ ಅಬಕಾರಿ ಅಧಿಕಾರಿಗಳ ಕಾರ್ಯಾಲಯದ ಮೇಲಾಧಿಕಾರಿಗಳೇ ಶಾಕ್ ಆಗಿದ್ದಾರೆ.

32 ಲಕ್ಷ ಮೌಲ್ಯದ 301 ಸಾರಾಯಿ ಬಾಕ್ಸ್ ಗಳನ್ನು ಸಿಬ್ಬಂದಿಗಳು ಕಳ್ಳತನ ಮಾಡಿದ್ದಾರೆ. ಜಪ್ತಿ ಮಾಡಿದ್ದ ಮಾರನೇ ದಿನವೇ ಕಳ್ಳತನ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಅಬಕಾರಿ ನಿರೀಕ್ಷಕ ದಾವಲಸಾಬ ಸಿಂದೋಗಿ, ಸದಾಶಿವ ಕೊರ್ತಿ, ಅಬಕಾರಿ ಉಪ ನಿರೀಕ್ಷಕಿ ಪುಷ್ಪಾ ಗಡಾದಿ ಸೇರಿದಂತೆ ಐವರು ಸಿಬ್ಬಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಅಲ್ಲದೇ ಐವರು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular