HomeKarnatakaBIG NEWS: ಚುನಾವಣೆ ದಿನ ಕೆಲ ಪ್ರವಾಸಿ ತಾಣಗಳಿಗೆ ನಿರ್ಬಂಧ

BIG NEWS: ಚುನಾವಣೆ ದಿನ ಕೆಲ ಪ್ರವಾಸಿ ತಾಣಗಳಿಗೆ ನಿರ್ಬಂಧ

ಮೈಸೂರು: ಮೇ 10 ರ ನಾಳೆ ವಿಧಾನಸಭಾ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಿಗೆ ರಜೆ ಘೋಷಿಸಲಾಗಿದೆ. ಆದರೆ ರಜೆ ಸಿಕ್ಕ ಖುಷಿಯಲ್ಲಿ ಕೆಲವರು ಮತ ಚಲಾಯಿಸದೇ ರಜಾ ಮಜಾ ಕಳೆಯಲು ಪ್ರವಾಸಿ ತಾಣಗಳಿಗೆ ತೆರಳುವ ಸಾಧ್ಯತೆ ಹೆಚ್ಚು, ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಮೈಸೂರಿನ ಕೆಲ ಪ್ರಮುಖ ತಾಣಗಳಿಗೆ ಮೇ 10ರ ನಾಳೆ ನಿರ್ಬಂಧ ಹಾಕಲಾಗಿದೆ. ಮತದಾನ ಮಾಡಿ ಬಂದವರಿಗೆ ಮಾತ್ರ ಪ್ರವಾಸಿ ತಾಣಗಳಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ.

ಮೈಸೂರು ಜಿಲ್ಲಾ ಟ್ರಾವಲ್ಸ್ ಮಾಲೀಕರು ಕಡ್ಡಾಯ ಮತದಾನಕ್ಕೆ ಬೆಂಬಲ ನೀಡಿದ್ದು, ಮತದಾನ ಮಾಡಿ ಬಂದವರಿಗೆ ಮಾತ್ರ ಪ್ರವಾಸಿ ವಾಹನಗಳನ್ನು ಬಳಸಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular