HomeKarnatakaBIG NEWS: ಚುನಾವಣೆಯಲ್ಲಿ ಸೋಲು; ಗ್ರಾಮ ಪಂಚಾಯತ್ ಸದಸ್ಯನ ಶರ್ಟ್ ಹರಿದು, ಚಪ್ಪಲಿಯಿಂದ ಹೊಡೆದು ಹಲ್ಲೆ;...

BIG NEWS: ಚುನಾವಣೆಯಲ್ಲಿ ಸೋಲು; ಗ್ರಾಮ ಪಂಚಾಯತ್ ಸದಸ್ಯನ ಶರ್ಟ್ ಹರಿದು, ಚಪ್ಪಲಿಯಿಂದ ಹೊಡೆದು ಹಲ್ಲೆ; ಪಂಚಾಯಿತಿ ಸದಸ್ಯೆ ರಂಪಾಟಕ್ಕೆ ದಂಗಾದ ಗ್ರಾಮಸ್ಥರು


ತುಮಕೂರು: ಚುನಾವಣೆಯ ಸೋಲಿನ ಹತಾಶೆಯಿಂದ ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರು ಏನೆಲ್ಲ ರಂಪಾಟ ಮಾಡಿದ್ದಾರೆ ನೋಡಿ. ಸದಸ್ಯರೊಬ್ಬರ ಶರ್ಟ್ ಹರಿದು, ಚಪ್ಪಲಿಯಿಂದ ಹಲ್ಲೆ ನಡೆಸಿ ರಾದ್ದಾಂತ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ತುರವೆಕೆರೆ ತಾಲೂಕಿನ ದಬ್ಬೇಘಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪರಾಭವಗೊಂಡ ಕಾರಣಕ್ಕೆ ಹತಾಶೆಗೊಂಡ ಜಿ.ಎಸ್.ಸುಧಾ, ಗ್ರಾಮ ಪಂಚಾಯಿತಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ್ ಶರ್ಟ್ ಹರಿದು ಹಾಕಿ ನನಗೆ ಮತ ಹಾಕಿಲ್ಲ, ಹಾಗಾಗಿ ನಾನು ಸೋತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆತನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸುಧಾ ವಿರುದ್ಧ ಸ್ಪರ್ಧಿಸಿದ್ದ ಛಾಯಾಮಣಿ ಗೆಲುವು ಸಾಧಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಸೋಲಿನ ಹತಾಶೆಗೆ ಪಂಚಾಯತ್ ಸದಸ್ಯೆಯ ರಂಪಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular