HomeKarnatakaBIG NEWS: ಚಲಿಸುತ್ತಿದ್ದ BMTC ಬಸ್ ಟೈರ್ ಸ್ಫೋಟ

BIG NEWS: ಚಲಿಸುತ್ತಿದ್ದ BMTC ಬಸ್ ಟೈರ್ ಸ್ಫೋಟ

ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ನ ಟೈರ್ ಏಕಾಏಕಿ ಸ್ಫೋಟಗೊಂಡ ಘಟನೆ ನಡೆದಿದೆ.

ಟೈರ್ ಸ್ಫೋಟದ ಶಬ್ಧಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಮೆಜೆಸ್ಟಿಕ್ ನಿಂದ ಶಿವಾಜಿನಗರಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್, ಫ್ರೀಡಂ ಪಾರ್ಕ್ ಬಳಿ ಬರುತ್ತಿದ್ದ ವೇಳೆ ಬಸ್ ಟೈರ್ ಸ್ಫೋಟಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೀಪಾಂಜಲಿ ನಗರ ಡಿಪೋ-16ಕ್ಕೆ ಸೇರಿದ ಬಸ್ ಇದಾಗಿದ್ದು, ಟೈರ್ ಸ್ಫೊಟಗೊಂಡ ವೇಳೆ ಬಸ್ ನಿಧಾನವಾಗಿ ಚಲಿಸುತ್ತಿದ್ದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ. ತಕ್ಷಣ ಬಸ್ ಚಾಲಕ ಸ್ಥಳದಲ್ಲಿಯೇ ಬಸ್ ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular