HomeKarnatakaBIG NEWS: ಎಂ ಎಲ್ ಸಿ ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನಿಸಿದ್ದ...

BIG NEWS: ಎಂ ಎಲ್ ಸಿ ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನಿಸಿದ್ದ ಕಾರು ಶೋ ರೂಂ ಮಾಲೀಕ

ಬೆಂಗಳೂರು: ಜೆಡಿಎಸ್ ಎಂ ಎಲ್ ಸಿ ಭೋಜೇಗೌಡ ಅವರ ಕಾರಿನ ನಂಬರ್ ಬಳಸಿ ಕದ್ದ ಕಾರನ್ನು ಮಾರಾಟ ಮಾಡಲು ಯತ್ನಿಸಿದ್ದ ಶೋ ರೂಂ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಕಾರು ಶೋ ರೂಂ IQ ಶೋ ರೂಂ ನಲ್ಲಿ ಈ ಘಟನೆ ನಡೆದಿದೆ. ಎಂಎಲ್ ಸಿ ಭೋಜೇಗೌಡರ ಕಾರಿನ ನಂಬರ್ ಬಳಸಿ ಕದ್ದ ಕಾರನ್ನು ಮಾರಾಟಕ್ಕೆ ಇಡಲಾಗಿತ್ತು. ನಂಬರ್ ನೋಡಿದಾಗ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕದ್ದ ಕಾರು ಮಾರಾಟಕ್ಕೆ ಇಂತಹ ಯತ್ನ ನಡೆಸಲಾಗಿದೆ ಎಂಬುದು ತಿಳಿದುಬಂದಿದೆ.

ಕೆಪಿಸಿಸಿ ಕಚೇರಿ ಬಳಿಯ ಪ್ರತಿಷ್ಠಿತ ಕಾರು ಶೋ ರೂಂ ಎದುರು ಎಂಎಲ್ ಸಿ ಕಾರಿನ ನಂಬರ್ ಇರುವ ಕಾರು ನಿಂತಿತ್ತು. ಇದನ್ನು ನೋಡಿದ ಭೋಜೇಗೌಡ ಅವರ ಪಿಎ ಮಾದೇಶ ಶೋ ರೂಂ ಗೆ ಹೋಗಿ ವಿಚಾರಿಸಿದಾಗ ಕಾರು ಮಾರಾಟಕ್ಕಿಟ್ಟಿದ್ದಾಗಿ ತಿಳಿಸಿದ್ದಾರೆ. ತಕ್ಷಣ ಮಾದೇಶ, ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸಿದಾಗ ಕದ್ದ ಕಾರಿನ ನಂಬರ್ ಬದಲಾಯಿಸಿ ಮಾರಾಟ ಮಾಡಲಾಗುತ್ತಿರುವ ಬಗ್ಗೆ ಗೊತ್ತಾಗಿದೆ. ಶೋ ರೂಂ ಮಾಲೀಕ ಶಹಬಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular