HomeKarnatakaBIG NEWS: ಉದ್ಯಮಿ ಕೈಲಾಸ್ ವ್ಯಾಸ್ ಫ್ಲಾಟ್ ನಲ್ಲಿ ಮುಂದುವರೆದ ಐಟಿ ದಾಳಿ; ಮೂರು ದಿನಗಳಿಂದ...

BIG NEWS: ಉದ್ಯಮಿ ಕೈಲಾಸ್ ವ್ಯಾಸ್ ಫ್ಲಾಟ್ ನಲ್ಲಿ ಮುಂದುವರೆದ ಐಟಿ ದಾಳಿ; ಮೂರು ದಿನಗಳಿಂದ ನಿರಂತರ ಶೋಧ

ಬಳ್ಳಾರಿ: ಬಳ್ಳಾರಿಯ ಕೈಗಾರಿಕೋದ್ಯಮಿ ಕೈಲಾಸ್ ವ್ಯಾಸ್ ರ ರಾಗಾ ಪೋರ್ಟ್ ಅಪಾರ್ಟ್ ಮೆಂಟ್ ಮೇಲೆ ಐಟಿ ದಾಳಿ ಮುಂದುವರೆದಿದ್ದು, ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಬಳ್ಳಾರಿಯ ವಿದ್ಯಾನಗರದಲ್ಲಿರುವ ರಾಗಾ ಪೋರ್ಟ್ ಫ್ಲಾಟ್ ನಂ. 310 ಮತ್ತು 510ರಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕೈಲಾಸ್ ವ್ಯಾಸ್ ಒಡೆತನದ ಹರಿ ಇಸ್ಪಾತ್ ಫ್ಯಾಕ್ಟರಿ ಮೇಲೂ ದಾಳಿ ಮುಂದುವರೆಸಿದ್ದಾರೆ. 72 ಗಂಟೆಗಳಿಂದ ನಿರಂತರ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಇನ್ನೂ ಪರಿಶೀಲನೆ ಮುಂದುವರೆಸಿದ್ದಾರೆ.

ಹರಿ ಇಸ್ಪಾತ್ ಕಾರ್ಖಾನೆಯಲ್ಲಿ ಸಚಿವ ಶ್ರೀರಾಮುಲು ಪಾಲುದಾರಿಕೆಯೂ ಇದೆ ಎಂದು ತಿಳಿದುಬಂದಿದೆ. ಮಾಜಿ ಶಾಸಕ ಸುರೇಶ್ ಬಾಬು ಪಾಲುದಾರಿಕೆಯ ಮಹಾಮಾನವ ವಾಷಿಂಗ್ ಪ್ಲಾಂಟ್ , ಲಾಡ್ ಕುಟುಂಬದ ಅಮರಜ್ಯೋತಿ ಫ್ಲಾಟ್, ಬಳ್ಳಾರಿಯ ವೆಂಕಟೇಶ್ವರ, ಶ್ರೀಹರಿ ಪಿಜಿಎಂ ಕಾರ್ಖಾನೆಗಳ ಮೇಲೂ ದಾಳಿ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular