BIG NEWS: ಇವರೇನು ಮನುಷ್ಯರೋ ? ರಾಕ್ಷಸರೋ ? ಸಚಿವ ಅಶ್ವತ್ಥನಾರಾಯಣ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬಾಗಲಕೋಟೆ: ಟಿಪ್ಪುನನ್ನು ಹೊಡೆದಂತೆ ಸಿದ್ದರಾಮಯ್ಯನವರನ್ನೂ ಹೊಡೆದು ಹಾಕಿ ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಹೇಳಿಕೆಗೆ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಮನುಷ್ಯರೋ? ರಾಕ್ಷಸರೋ? ಎಂದು ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನ್ನನ್ನು ಹೊಡೆದು ಹಾಕಿ ಎಂದು ಸಚಿವರೊಬ್ಬರು ಕರೆ ನೀಡಿದ್ದಾರೆ. ಇವರೆಲ್ಲ ಮನುಷ್ಯರೋ? ರಾಕ್ಷಸರೋ? ಹೊಡೆದು ಹಾಕಲು ನೀವೆಲ್ಲರೂ ಬಿಡುತ್ತೀರೆ? ಎಂದು ಜನರನ್ನು ಪ್ರಶ್ನಿಸಿದ್ದಾರೆ.

ನಾನು ಟಿಪ್ಪು, ರಾಯಣ್ಣ, ಬಸವಣ್ಣ, ಸೇವಾಲಾಲ್, ಕಿತ್ತೂರು ರಾಣಿ ಚೆನ್ನಮ್ಮ ಎಲ್ಲರನ್ನೂ ಗೌರವಿಸುತ್ತೇನೆ. ಸರ್ಕಾರಿ ಕಚೇರಿಗಳನ್ನು ಬಸವಣ್ಣನವರ ಫೋಟೋ ಅಳವಡಿಸಬೇಕು ಎಂದು ಜಾರಿಗೆ ತಂದಿದ್ದೇ ನಾನು. ಹೀಗಿರುವಾಗ ಇವರಿಂದ ನಾನು ಪಾಠ ಕಲಿಯಬೇಕೇ? ಎಂದು ಗುಡುಗಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read