HomeKarnatakaBIG NEWS: ಅಶ್ವತ್ಥನಾರಾಯಣನೇ ಉರಿಗೌಡ, ಸಿ.ಟಿ. ರವಿಯೇ ನಂಜೇಗೌಡ; ಬಿಜೆಪಿ ನಾಯಕರ ವಿರುದ್ಧ ಡಿ.ಕೆ.ಶಿ. ಕಿಡಿ

BIG NEWS: ಅಶ್ವತ್ಥನಾರಾಯಣನೇ ಉರಿಗೌಡ, ಸಿ.ಟಿ. ರವಿಯೇ ನಂಜೇಗೌಡ; ಬಿಜೆಪಿ ನಾಯಕರ ವಿರುದ್ಧ ಡಿ.ಕೆ.ಶಿ. ಕಿಡಿ

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಉರಿಗೌಡ, ನಂಜೇಗೌಡ ವಿಚಾರ ಸ್ವಲ್ಪ ಮಟ್ಟಿಗೆ ತಣ್ಣಗಾದಂತಿದೆ. ಇದು ಬಿಜೆಪಿಗರೇ ಸೃಷ್ಟಿಸಿದ ಪಾತ್ರಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಅಶ್ವತ್ಥನಾರಾಯಣನೇ ಉರಿಗೌಡ, ಸಿ.ಟಿ. ರವಿಯೇ ನಂಜೇಗೌಡ. ಬಿಜೆಪಿಗರೇ ಸೃಷ್ಟಿಸಿರುವ ಕಪೋಲಕಲ್ಪಿತ ಪಾತ್ರಗಳಿವು. ಈಗಾಗಲೇ ನಿರ್ಮಲಾನಂದ ಸ್ವಾಮೀಜಿ ಈ ಬಗ್ಗೆ ಮಾತನಾಡಿದ್ದಾರೆ. ಚರ್ಚೆ ಇಲ್ಲಿಗೆ ನಿಲ್ಲಿಸುವುದು ಉತ್ತಮ ಎಂದರು.

ಸಚಿವ ಮುನಿರತ್ನ ಸಿನಿಮಾ ನಿರ್ಮಾಣ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇದನ್ನು ಇಲ್ಲಿಗೆ ನಿಲ್ಲಿಸಿದ್ರೆ ಒಳಿತು. ಇಲ್ಲವಾದರೆ ಹೋರಾಟ ಮಾಡುತ್ತೇವೆ. ಪಕ್ಷ ಬಿಟ್ಟು ಸಮುದಾಯದ ವ್ಯಕ್ತಿಯಾಗಿ ಹೋರಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular