BIG NEWS: ಅಧಿಕೃತ ಪಕ್ಷದ ಮಾನ್ಯತೆ ಕಳೆದುಕೊಂಡ ಜೆಡಿಎಸ್…! ಸ್ಥಾನಮಾನ ನೀಡುವ ವಿಚಾರ ಮುಂಬರುವ ವಿಧಾನಸಭಾಧ್ಯಕ್ಷರ ವಿವೇಚನೆಗೆ

ಈ ಬಾರಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ರಣೋತ್ಸಹದಿಂದ ಕಣಕ್ಕಿಳಿದಿದ್ದ ಜೆಡಿಎಸ್, ಫಲಿತಾಂಶದಲ್ಲಿ ತೀವ್ರ ನಿರಾಸೆಯನ್ನು ಅನುಭವಿಸಿದೆ. ಕೇವಲ 19 ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

224 ಸದಸ್ಯ ಬಲದ ವಿಧಾನಸಭೆಯಲ್ಲಿ ಅಧಿಕೃತ ಪಕ್ಷದ ಸ್ಥಾನಮಾನ ಸಿಗಬೇಕಾದರೆ ಒಟ್ಟು ಸ್ಥಾನಗಳಲ್ಲಿ ಹತ್ತನೇ ಒಂದರಷ್ಟು ಅಂದರೆ 22 ಸ್ಥಾನಗಳಲ್ಲಿ ಜೆಡಿಎಸ್ ಗೆಲ್ಲಬೇಕಾಗಿದ್ದು, ಹೀಗಾಗಿ ಈ ಬಾರಿ ಅಧಿಕೃತ ಪಕ್ಷದ ಸ್ಥಾನಮಾನ ಸಿಗುವುದು ಅನುಮಾನವಾಗಿದೆ.

ನಿಯಮದ ಪ್ರಕಾರ ಜೆಡಿಎಸ್ ಗೆ ಅಧಿಕೃತ ಪಕ್ಷದ ಸ್ಥಾನಮಾನ ಸಿಗುವುದಿಲ್ಲವಾದರೂ ಸಹ ರಾಜ್ಯದ ಅತ್ಯಂತ ಹಳೆಯ ಪಕ್ಷವಾಗಿರುವುದು ಜೊತೆಗೆ ಆ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ಮಾಜಿ ಪ್ರಧಾನಿಗಳಾಗಿರುವುದರಿಂದ ವಿಧಾನಸಭೆಯಲ್ಲಿ ಅಧಿಕೃತ ಪಕ್ಷದ ಮಾನ್ಯತೆ ಮತ್ತು ಕೊಠಡಿ ನೀಡುವ ವಿಚಾರವನ್ನು ಮುಂಬರುವ ವಿಧಾನಸಭಾ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read