HomeKarnatakaBIG BREAKING : ಶಿವಮೊಗ್ಗ ರೈಲು ನಿಲ್ದಾಣದ ಬಳಿ ಪತ್ತೆಯಾಗಿದ್ದ ನಿಗೂಢ `ಬಾಕ್ಸ್’...

BIG BREAKING : ಶಿವಮೊಗ್ಗ ರೈಲು ನಿಲ್ದಾಣದ ಬಳಿ ಪತ್ತೆಯಾಗಿದ್ದ ನಿಗೂಢ `ಬಾಕ್ಸ್’ ಓಪನ್!

ಶಿವಮೊಗ್ಗ : ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಅನಾಮಧೇಯ ಬಾಕ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬ್ ನಿಷ್ಕ್ರಿಯ ದಳ ಎರಡೂ ಬಾಕ್ಸ್ ಗಳನ್ನು ಓಪನ್ ಮಾಡಿದೆ.

ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಶಿವಮೊಗ್ಗಕ್ಕೆ ತೆರಳಿತ್ತು.ಇಂದು ಬೆಳಗಿನ ಜಾವ ಕ್ರಷರ್ ಕಲ್ಲು ಸ್ಪೋಟಕ ಮಾದರಿಯಲ್ಲಿ ಬೀಗ ಒಡೆಯಲಾಗಿದೆ. ತಡರಾತ್ರಿ 2:20ಕ್ಕೆ ಮೊದಲ ಪೆಟ್ಟಿಗೆ ಮತ್ತು ಬೆಳಗಿನ ಜಾವ 3.24ಕ್ಕೆ ಎರಡನೇ ಪೆಟ್ಟಿಗೆಯ ಬೀಗ ಒಡೆಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ಈ ಬಾಕ್ಸ್ ಗಳಲ್ಲಿ ಬಿಳಿ ಪೌಡರ್ ಮಾದರಿಯ ವಸ್ತು ಪತ್ತೆಯಾಗಿದೆ. ಸದ್ಯಕ್ಕೆ ಈ ಪೌಡರ್ ಯಾವುದು ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳು ಈ ಪೌಡರ್ ಮಾದರಿಯನ್ನು ಎಫ್ ಎಸ್  ಎಲ್ ಗೆ ಕಳುಹಿಸಲು ನಿರ್ಧರಿಸಿದ್ದಾರೆ. ಎಫ್ ಎಸ್ ಎಲ್  ವರದಿ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular