HomeIndiaBIG BREAKING : `IRCTC’ ವೆಬ್ ಸೈಟ್ ಸರ್ವರ್ ಡೌನ್ : ರೈಲು ಟಿಕೆಟ್ ಬುಕ್...

BIG BREAKING : `IRCTC’ ವೆಬ್ ಸೈಟ್ ಸರ್ವರ್ ಡೌನ್ : ರೈಲು ಟಿಕೆಟ್ ಬುಕ್ ಮಾಡಲು ಪ್ರಯಾಣಿಕರ ಪರದಾಟ

ನವದೆಹಲಿ : ರೈಲ್ವೆ ಟಿಕೆಟಿಂಗ್ ಸೇವೆಗಳನ್ನು ನೀಡುವ ಆನ್ಲೈನ್ ಪ್ಲಾಟ್ಫಾರ್ಮ್ ಐಆರ್ ಸಿಟಿಸಿ (IRCTC) ತಾಂತ್ರಿಕ ಕಾರಣಗಳಿಂದಾಗಿ ವೆಬ್ ಸೈಟ್ ಡೌನ್ ಆಗಿದ್ದು, ಟಿಕೆಟ್ ಬುಕ್ ಮಾಡಲು ಪ್ರಯಾಣಿಕರು ಪರದಾಡುವಂತಾಗಿದೆ.

 ತಾಂತ್ರಿಕ ಕಾರಣಗಳಿಂದಾಗಿ ಟಿಕೆಟಿಂಗ್ ಸೇವೆ ಲಭ್ಯವಿಲ್ಲದ ಕಾರಣ ಟಿಕೆಟ್ ಬುಕ್ ಮಾಡಲು ಪ್ರಯಾಣಿಕರು ಇಂದು ಐಆರ್ ಸಿಟಿಸಿ ವೆಬ್ಸೈಟ್ನಲ್ಲಿ ಸಮಸ್ಯೆಗಳನ್ನು ಎದುರಿಸಿದರು. ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗದಿದ್ದಾಗ ಮುಂಜಾನೆಯ ಸಮಯದಲ್ಲಿ ಕೆಲವು ಬಳಕೆದಾರರು ಈ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಐಆರ್ ಸಿಟಿಸಿ ತಕ್ಷಣವೇ ಸಮಸ್ಯೆಯನ್ನು ಒಪ್ಪಿಕೊಂಡಿತು, ತಮ್ಮ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಳಕೆದಾರರಿಗೆ ಭರವಸೆ ನೀಡಿತು.

ಈ ಬಗ್ ಗೆಟ್ವೀಟ್ ಮಾಡಿರುವ ಐಆರ್ ಸಿಟಿಸಿ, “ತಾಂತ್ರಿಕ ಕಾರಣಗಳಿಂದಾಗಿ ಟಿಕೆಟಿಂಗ್ ಸೇವೆ ಲಭ್ಯವಿಲ್ಲ. ನಮ್ಮ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸುತ್ತಿದೆ. ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದ ಕೂಡಲೇ ನಾವು ತಿಳಿಸುತ್ತೇವೆ” ಎಂದು ಹೇಳಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular