BIG BREAKING: ನನಗೆ ತೊಂದರೆ ನೀಡಿದವರು ಈಗ ದಿನಕ್ಕೆ 20 ರಿಂದ 30 ಮಾತ್ರೆ ನುಂಗ್ತಾರೆ; ಹಳೆ ದೋಸ್ತಿಗಳ ವಿರುದ್ಧ ಗುಡುಗಿದ ಜನಾರ್ದನ ರೆಡ್ಡಿ

ಹೊಸ ಪಕ್ಷ ಕಟ್ಟಿರುವ ಗಾಲಿ ಜನಾರ್ದನ ರೆಡ್ಡಿ, ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ತಮ್ಮ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಜೊತೆಗೆ ಭರ್ಜರಿ ಚುನಾವಣಾ ಪ್ರಚಾರ ಕಾರ್ಯ ನಡೆಸುತ್ತಿದ್ದು, ಬಿಜೆಪಿ ನಾಯಕರ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಯಾರ ಹೆಸರನ್ನೂ ಉಲ್ಲೇಖಿಸದೆ ನನಗೆ ತೊಂದರೆ ಕೊಟ್ಟವರು ನಿದ್ರೆ ಮಾಡಲು ಈಗ ದಿನಕ್ಕೆ 20 ರಿಂದ 30 ಮಾತ್ರೆ ನುಂಗುತ್ತಾರೆ. ಆದರೆ ಮಾತ್ರೆ ಇಲ್ಲದೆ ಮಲಗುವ ಶಕ್ತಿಯನ್ನು ದೇವರು ನನಗೆ ದಯಪಾಲಿಸಿದ್ದಾರೆ ಎಂದರು.

12 ವರ್ಷಗಳ ಕಾಲ ಸಾರ್ವಜನಿಕ ಜೀವನದಿಂದ ನನ್ನನ್ನು ದೂರ ಮಾಡಿದರು. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ತಂದಿದ್ದೆ ಜನಾರ್ದನ ರೆಡ್ಡಿ ಎಂದು ಈಗಲೂ ರಾಜ್ಯದ ಜನತೆ ಮಾತನಾಡಿಕೊಳ್ಳುತ್ತಾರೆ. ನನಗೂ ಕೂಡಾ ಬಲೆ ಹಾಕುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read