HomeKarnatakaಬೀದರ್-ಬೆಂಗಳೂರು ವಿಮಾನ ಸೇವೆ ಸ್ಥಗಿತಗೊಳಿಸಿದ ಸ್ಟಾರ್ ಏರ್

ಬೀದರ್-ಬೆಂಗಳೂರು ವಿಮಾನ ಸೇವೆ ಸ್ಥಗಿತಗೊಳಿಸಿದ ಸ್ಟಾರ್ ಏರ್

ಬೀದರ್: ಬೀದರ್ ನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ವಿಮಾನ ಹಾರಾಟ ನಡೆಸಿದ್ದ ಸ್ಟಾರ್ ಏರ್ ಇದೀಗ ತನ್ನ ಸೇವೆಯನ್ನು ನಿಲ್ಲಿಸಿದೆ.

ಬೀದರ್ ನಿಂದ ಬೆಂಗಳೂರು, ದೆಹಲಿ, ಹೈದರಾಬಾದ್ ಹಾಗೂ ಪುಣೆಗೆ ವಿಮಾನ ಹಾರಾಟ ಮಾಡಬೇಕು. ಬೀದರ್ ನಲ್ಲೊಂದು ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಜನರು ಒತ್ತಾಯಿಸಿದ್ದರು. ಇದಕ್ಕಾಗಿ ಹಲವಾರು ಹೋರಾಟಗಳೂ ನಡೆದಿದ್ದವು. ಅಂತಿಮವಾಗಿ ಕೇಂದ್ರ ಸರ್ಕಾರ 2020ರ ಫೆಬ್ರವರಿ 7ರಂದು ಬೀದರ್ ನಿಂದ ಬೆಂಗಳೂರಿಗೆ 72 ಸೀಟ್ ನ ಟ್ರೋಜೆಟ್ ವಿಮಾನದ ಹಾರಾಟ ಆರಂಭಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಪ್ರಯಾಣಿಕರ ಕೊರತೆ, ಆರ್ಥಿಕ ಸಂಕಷ್ಟದಿಂದಾಗಿ ಕೆಲ ತಿಂಗಳಲ್ಲೇ ಟ್ರೋಜೆಟ್ ತನ್ನ ಹಾರಾಟ ಸ್ಥಗಿತಗೊಳಿಸಿತು. ಇದಾದ ಬಳಿಕ ಒಂದು ವರ್ಷಗಳ ಕಾಲ ಬೀದರ್ ನಲ್ಲಿ ವಿಮಾನ ಹಾರಾಟವೇ ಇರಲಿಲ್ಲ. ಬಳಿಕ 2022 ಜೂನ್ 15ರಂದು ಸ್ಟಾರ್ ಏರ್ ವಿಮಾನ ಹಾರಾಟ ಆರಂಭಿಸಿತು. ಆದರೆ ಈಗ ಸ್ಟಾರ್ ಏರ್ ಕೂಡ ನಷ್ಟದ ಕಾರಣ ಹೇಳಿ ತನ್ನ ಹಾರಾಟ ನಿಲ್ಲಿಸಿದೆ. ಬೀದರ್ ನಲ್ಲಿ ಸುಸಜ್ಜಿತ, ಅತ್ಯಾಧುನಿಕ ಏರ್ ಪೋರ್ಟ್ ಇದ್ದರೂ ಕೂಡ ವಿಮಾನ ಯಾನ ಸೌಲಭ್ಯ ಮಾತ್ರ ಇಲ್ಲದಂತಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular