HomeKarnatakaBIG NEWS: ನಷ್ಟದ ಕಾರಣಕ್ಕೆ ಬೀದರ್ - ಬೆಂಗಳೂರು ನಡುವಿನ ವಿಮಾನ ಸೇವೆ ಸ್ಥಗಿತಗೊಳಿಸಿದ 'ಸ್ಟಾರ್...

BIG NEWS: ನಷ್ಟದ ಕಾರಣಕ್ಕೆ ಬೀದರ್ – ಬೆಂಗಳೂರು ನಡುವಿನ ವಿಮಾನ ಸೇವೆ ಸ್ಥಗಿತಗೊಳಿಸಿದ ‘ಸ್ಟಾರ್ ಏರ್’

ಬೀದರ್ – ಬೆಂಗಳೂರು ನಡುವೆ ಸಂಚರಿಸುವ ವಿಮಾನ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನಷ್ಟದ ಕಾರಣಕ್ಕೆ ‘ಸ್ಟಾರ್ ಏರ್’ ತನ್ನ ವಿಮಾನ ಸೇವೆಯನ್ನು ಮಂಗಳವಾರದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ.

ಈ ಕುರಿತಂತೆ ‘ಸ್ಟಾರ್ ಏರ್’ ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ವಿಮಾನಯಾನ ಸೇವೆಯು ನಷ್ಟದಲ್ಲಿ ನಡೆಯುತ್ತಿದ್ದ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈವರೆಗೆ ಬೀದರ್ – ಬೆಂಗಳೂರು, ಬೆಂಗಳೂರು – ಬೀದರ್ ನಡುವೆ ‘ಸ್ಟಾರ್ ಏರ್’ ನಿತ್ಯ ಒಂದು ಸಲ ತನ್ನ ವಿಮಾನ ಹಾರಾಟ ನಡೆಸುತ್ತಿದ್ದು, ನಷ್ಟದ ಹಿನ್ನೆಲೆಯಲ್ಲಿ ಈಗ ಒಪ್ಪಂದದ ಅವಧಿಗೂ ಮುನ್ನವೇ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular