SHOCKING: ಪತ್ನಿಯ ಅಕ್ರಮ ಸಂಬಂಧ ಶಂಕೆಯಿಂದ ಘೋರ ಕೃತ್ಯ; ಮಗುವಿಗೆ ವಿಷದ ಇಂಜೆಕ್ಷನ್

ಭುವನೇಶ್ವರ್: ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನದಿಂದ ವ್ಯಕ್ತಿಯೊಬ್ಬ ಮಗುವಿನ ಕೊಲೆಗೆ ಯತ್ನಿಸಿದ್ದಾನೆ.

ಮಗು ತನಗೆ ಸೇರಿಲ್ಲ ಎಂದು ಶಂಕಿಸಿದ ವ್ಯಕ್ತಿ ತನ್ನದೇ ಶಿಶುವಿಗೆ ವಿಷ ಚುಚ್ಚುಮದ್ದು ನೀಡಿ ಕೊಲ್ಲಲು ಯತ್ನಿಸಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಒಡಿಶಾದ ಬಾಲಸೋರ್ ಜಿಲ್ಲೆಯ ನೀಲಗಿರಿ ಪ್ರದೇಶದ ಸಿಂಘಿರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ತಂದೆ ಚಂದನ್ ಮಹಾನನನ್ನು ಪೊಲೀಸರು ಬಂಧಿಸಿದ್ದು, ಬಾಲಸೋರ್ ಆಸ್ಪತ್ರೆಯಲ್ಲಿ ಶಿಶು ಚಿಕಿತ್ಸೆ ಪಡೆಯುತ್ತಿದೆ. ಚಂದನ್ ಮಹಾನಾ ಮತ್ತು ಅವರ ಪತ್ನಿ ತನ್ಮಯಿ ಅವರಿಗೆ ಮೇ 9 ರಂದು ಹೆಣ್ಣು ಮಗು ಜನಿಸಿದೆ. ತನ್ಮಯಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ನೀಲಗಿರಿ ಪೊಲೀಸ್ ವ್ಯಾಪ್ತಿಯ ಸಿಂಘಿರಿ ಗ್ರಾಮದಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದರು.

ಕಳೆದ ಸೋಮವಾರ, ಚಂದನ್ ತನ್ನ ಅತ್ತೆಯ ಮನೆಗೆ ಭೇಟಿ ನೀಡಿದ್ದ. ತನ್ಮಯಿ ಬಾತ್ರೂಮ್ ನಲ್ಲಿದ್ದಾಗ ತನ್ನ ನವಜಾತ ಶಿಶುವಿಗೆ ಕೀಟನಾಶಕದ ಇಂಜೆಕ್ಷನ್ ವನ್ನು ಚುಚ್ಚಿದ್ದಾನೆ. ಮಗುವಿನ ಅಳುವನ್ನು ಕೇಳಿದ ತನ್ಮಯಿ ಹೊರಗೆ ಬಂದು ನೋಡಿದಾಗ ಸಿರಿಂಜ್ ಮತ್ತು ಕೀಟನಾಶಕ ಬಾಟಲ್ ಪತ್ತೆಯಾಗಿದೆ. ತನ್ಮಯಿ ತಂದೆ ಭಾಗೀರಥಿ ಸಿಂಗ್, ರ ಗ್ರಾಮಸ್ಥರು ಆತನಿಗೆ ಘೇರಾವ್ ಹಾಕಿದಾಗ ಚಂದನ್ ವಿಷದ ಚುಚ್ಚುಮದ್ದನ್ನು ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ವಿಚಾರಣೆಯ ಸಮಯದಲ್ಲಿ ಮಗುವಿನ ಪೋಷಕರ ಬಗ್ಗೆ ತನಗೆ ಅನುಮಾನವಿದೆ. ಆದ್ದರಿಂದ ಕೀಟನಾಶಕದ ಇಂಜೆಕ್ಷನ್ ಚುಚ್ಚಿದೆ ಎಂದು ತಿಳಿಸಿರುವುದಾಗಿ ಬಾಲಸೋರ್ ಪೊಲೀಸ್ ವರಿಷ್ಠಾಧಿಕಾರಿ ಸಾಗರಿಕಾ ನಾಥ್ ಹೇಳಿದ್ದಾರೆ. ಚಂದನ್ ಹೇಳಿದಂತೆ ಅಕ್ರಮ ಸಂಬಂಧದ ಆರೋಪವನ್ನು ತಳ್ಳಿಹಾಕಿರುವ ತನ್ಮಯಿ ತನ್ನ ಮಗಳು ಮತ್ತು ಗಂಡನ ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read