HomeIndiaಮಹಿಳೆಯೊಂದಿಗೆ ಕಾನ್ಸ್​ಟೆಬಲ್​ ಅನುಚಿತ ವರ್ತನೆ: ತನಿಖೆ ಆರಂಭ

ಮಹಿಳೆಯೊಂದಿಗೆ ಕಾನ್ಸ್​ಟೆಬಲ್​ ಅನುಚಿತ ವರ್ತನೆ: ತನಿಖೆ ಆರಂಭ

ಮಹಿಳಾ ದಿನಾಚರಣೆಯ ದಿನ ಭೋಪಾಲ್​ನಲ್ಲಿ ನಾಚಿಕೆಗೇಡಿನ ಘಟನೆ ವರದಿಯಾಗಿದೆ. ಕೋಹ್-ಎ-ಫಿಜಾ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಕಾನ್‌ಸ್ಟೆಬಲ್ ತಡರಾತ್ರಿ ಸಾಮಂತರ್ ರಸ್ತೆಯ ಬಳಿ ಮಹಿಳೆಯೊಬ್ಬರನ್ನು ಅಶ್ಲೀಲವಾಗಿ ನಡೆಸಿಕೊಂಡಿರುವ ಘಟನೆ ನಡೆದಿದೆ.

ಆದಾಗ್ಯೂ, ಕಾನ್‌ಸ್ಟೆಬಲ್ ಆರೋಪಗಳನ್ನು ನಿರಾಕರಿಸಿದ್ದಾನೆ. ಮಹಿಳೆ ತನ್ನ ಸ್ನೇಹಿತೆಯಾಗಿದ್ದು, ಅವಳು ಅಮಲೇರಿದ ಸ್ಥಿತಿಯಲ್ಲಿದ್ದುದರಿಂದ ಅವನು ಅವಳಿಗೆ ಸಹಾಯ ಮಾಡಲು ಪ್ರಯತ್ನಿಸಿದುದಾಗಿ ಹೇಳಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೋಹ್-ಇ-ಫಿಜಾ ಪೊಲೀಸರ ಪ್ರಕಾರ, ಕಾನ್‌ಸ್ಟೆಬಲ್ ಪುಷ್ಪೇಂದ್ರ ಜಾಡೋನ್ ಮಹಿಳೆಯನ್ನು ರಾತ್ರಿ 11 ಗಂಟೆಗೆ ಭೇಟಿಯಾಗಿದ್ದಾನೆ. ಈ ಸಂದರ್ಭದಲ್ಲಿ ಅಮಲೇರಿದ ಸ್ಥಿತಿಯಲ್ಲಿದ್ದ ಮಹಿಳೆಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ತಾನು ಅವಳನ್ನು ಮನೆಗೆ ಬಿಡುವುದಾಗಿ ಹೇಳಿದುದಾಗಿ ಕಾನ್ಸ್​ಟೆಬಲ್​ ಹೇಳಿದ್ದಾನೆ.

ಮಹಿಳೆ ಮನೆಗೆ ಹೋಗಲು ನಿರಾಕರಿಸಿದ್ದರಿಂದ, ಜಾಡೋನ್ ಅವಳನ್ನು ತನ್ನ ಬೈಕ್‌ನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾನೆ ಎಂದು ಆತ ಹೇಳಿಕೊಂಡಿದ್ದಾರೆ. ಆದರೆ ಈತ ಆಕೆಯ ಜೊತೆ ಅನುಚಿತವಾಗಿ ನಡೆದುಕೊಂಡಿರುವುದಾಗಿ ಆರೋಪಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಸಿಸಿ ಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular