HomeIndiaಭಾರತೀಯ ಟೆಕ್ಕಿಗಳಿಗೆ ಅಮೆರಿಕದಿಂದ ಬಿಗ್ ಶಾಕ್; ಕಾಗ್ನಿಜೆಂಟ್‌ನ PERM ಅರ್ಜಿಗಳಿಗೆ ಬ್ರೇಕ್!

ಭಾರತೀಯ ಟೆಕ್ಕಿಗಳಿಗೆ ಅಮೆರಿಕದಿಂದ ಬಿಗ್ ಶಾಕ್; ಕಾಗ್ನಿಜೆಂಟ್‌ನ PERM ಅರ್ಜಿಗಳಿಗೆ ಬ್ರೇಕ್!

ಅಮೆರಿಕದಲ್ಲಿ ಉದ್ಯೋಗ ಮಾಡುತ್ತಾ ಗ್ರೀನ್ ಕಾರ್ಡ್ ಪಡೆದು ಅಲ್ಲಿಯೇ ನೆಲೆಸಬೇಕೆಂಬ ಕನಸು ಕಾಣುತ್ತಿರುವ ಭಾರತೀಯ ಟೆಕ್ಕಿಗಳಿಗೆ ಭಾರೀ ಹಿನ್ನಡೆಯಾಗಿದೆ. ಐಟಿ ದಿಗ್ಗಜ ಸಂಸ್ಥೆ ಕಾಗ್ನಿಜೆಂಟ್‌ಗೆ (Cognizant) ಸಂಬಂಧಿಸಿದ ಎಲ್ಲಾ ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್ (PERM) ಅರ್ಜಿಗಳ ಪ್ರಕ್ರಿಯೆಯನ್ನು ಅಮೆರಿಕ ಸ್ಥಗಿತಗೊಳಿಸಿದೆ. ವರ್ಕ್ ವೀಸಾ ಕಾರ್ಯಕ್ರಮಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಕುರಿತು ದೇಶಾದ್ಯಂತ ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಹೌದು. ವೀಸಾ ಅಕ್ರಮಗಳ ಆರೋಪದ ತನಿಖೆ ತೀವ್ರಗೊಂಡಿರುವ ಬೆನ್ನಲ್ಲೇ ಐಟಿ ದಿಗ್ಗಜ ಕಾಗ್ನಿಜೆಂಟ್‌ನ PERM ಅರ್ಜಿಗಳ ಪ್ರಕ್ರಿಯೆಯನ್ನು ಅಮೆರಿಕ ಸ್ಥಗಿತಗೊಳಿಸಿದೆ. ಈ ಬೆಳವಣಿಗೆ ಕಾಗ್ನಿಜೆಂಟ್‌ಗೆ ಮಾತ್ರವಲ್ಲದೆ TCS, ಇನ್ಫೋಸಿಸ್, ವಿಪ್ರೋ, HCL ಸೇರಿದಂತೆ ಪ್ರಮುಖ ಭಾರತೀಯ ಐಟಿ ಕಂಪನಿಗಳ ಉದ್ಯೋಗಿಗಳ ಗ್ರೀನ್ ಕಾರ್ಡ್ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುವ ಆತಂಕ ಮೂಡಿಸಿದೆ.

ವಿದೇಶಿ ಉದ್ಯೋಗಿಗಳಿಗೆ ಅಮೆರಿಕದಲ್ಲಿ ಶಾಶ್ವತ ನಿವಾಸ ಪಡೆಯುವ ಪ್ರಕ್ರಿಯೆಯಲ್ಲಿ PERM ಅತ್ಯಂತ ಪ್ರಮುಖ ಹಂತವಾಗಿದೆ. ಇದರ ನಿಯಮಗಳ ಪ್ರಕಾರ, ಅಮೆರಿಕದಲ್ಲಿನ ನಿರ್ದಿಷ್ಟ ಉದ್ಯೋಗಕ್ಕೆ ಅರ್ಹರಾಗಿರುವ ಸ್ಥಳೀಯ ವೃತ್ತಿಪರರು ಲಭ್ಯವಿಲ್ಲ ಎಂಬುದನ್ನು ಹಾಗೂ ಈ ಕಾರಣದಿಂದ ವಿದೇಶದಿಂದ ಉದ್ಯೋಗಿಗಳನ್ನು ನೇಮಿಸಿಕೊಂಡಿರುವುದಾಗಿ ಸಂಬಂಧಿತ ಕಂಪನಿಗಳು ಸಾಬೀತುಪಡಿಸಬೇಕಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೆ, ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದರಿಂದ ಸ್ಥಳೀಯ ಅಮೆರಿಕನ್ನರ ವೇತನ ಅಥವಾ ಕೆಲಸದ ಸಮಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಬಾರದು ಎಂಬ ನಿಯಮವೂ ಇದೆ.

H-1B, PERM ನಿಯಮ ಉಲ್ಲಂಘನೆಗಳ ಬಗ್ಗೆ ತನಿಖೆ

H-1B ಹಾಗೂ PERM ವೀಸಾ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ವೈಟ್ ಹೌಸ್ ಫ್ರಾಡ್ ಟಾಸ್ಕ್ ಫೋರ್ಸ್ ನೇತೃತ್ವದಲ್ಲಿ ಜುಲೈನಿಂದಲೇ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಗ್ನಿಜೆಂಟ್ ಮಾತ್ರವಲ್ಲದೆ ಕ್ಲೌಡೇರಾ (Cloudera) ಸೇರಿದಂತೆ ಇತರ ಐಟಿ ಸಂಸ್ಥೆಗಳ ಮೇಲೂ ಅಧಿಕಾರಿಗಳ ನಿಗಾ ಹೆಚ್ಚಾಗಿದೆ.

ಅಮೆರಿಕದ ವೃತ್ತಿಪರರು ಮತ್ತು ಕಾರ್ಮಿಕರ ಹಿತಾಸಕ್ತಿಗಳಿಗೆ ಹಾನಿಯಾಗುವ ಯಾವುದೇ ಕ್ರಮಗಳನ್ನು ಸಹಿಸುವುದಿಲ್ಲ ಎಂದು ಆ దేశದ ಲೇಬರ್ ಡಿಪಾರ್ಟ್‌ಮೆಂಟ್ ಇನ್‌ಸ್ಪೆಕ್ಟರ್ ಜನರಲ್ ಆಂಥೋನಿ ಡಿ ಎಸ್ಪೋಸಿಟೋ ಸ್ಪಷ್ಟಪಡಿಸಿದ್ದಾರೆ. ಅಕ್ರಮಗಳಲ್ಲಿ ತೊಡಗಿರುವವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಕಾಗ್ನಿಜೆಂಟ್‌ಗೆ ಏಕೆ ದೊಡ್ಡ ಹೊಡೆತ?

ಅಮೆರಿಕದಲ್ಲಿ ಅತಿ ಹೆಚ್ಚು H-1B ವೀಸಾಗಳನ್ನು ಪ್ರಾಯೋಜಿಸುವ ಕಂಪನಿಗಳಲ್ಲಿ ಕಾಗ್ನಿಜೆಂಟ್ ಕೂಡ ಒಂದಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆ ಪಡೆಯುತ್ತಿರುವ ವೀಸಾಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ.

2020ರಲ್ಲಿ ಕಾಗ್ನಿಜೆಂಟ್‌ಗೆ 9,413 H-1B ವೀಸಾಗಳು ಅನುಮೋದನೆಯಾಗಿದ್ದವು. ಆದರೆ ಕಳೆದ ವರ್ಷ ಈ ಸಂಖ್ಯೆ 3,510ಕ್ಕೆ ಇಳಿಕೆಯಾಗಿದೆ.

TCS, Infosys, Wipro, HCLಗೂ ಆತಂಕ

PERM ನಿಯಮಗಳ ಕುರಿತಾದ ಈ ಬೆಳವಣಿಗೆ ಕೇವಲ ಕಾಗ್ನಿಜೆಂಟ್‌ಗೆ ಮಾತ್ರ ಸೀಮಿತವಾಗುವ ಸಾಧ್ಯತೆ ಇಲ್ಲ. TCS, Infosys, Wipro ಮತ್ತು HCL ಸೇರಿದಂತೆ ಪ್ರಮುಖ ಭಾರತೀಯ ಐಟಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಗಳ ಗ್ರೀನ್ ಕಾರ್ಡ್ ಪ್ರಕ್ರಿಯೆಯ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಸಂಸ್ಥೆಗಳ ಅಮೆರಿಕದ ಕಾರ್ಯಾಚರಣೆಗಳು ತಮ್ಮ ಉದ್ಯೋಗಿಗಳಿಗಾಗಿ ವಿವಿಧ ವೀಸಾ ಕಾರ್ಯಕ್ರಮಗಳ ಮೇಲೆ ಸಾಕಷ್ಟು ಅವಲಂಬಿತವಾಗಿವೆ. ಹೀಗಾಗಿ ಕಾಗ್ನಿಜೆಂಟ್ ವಿರುದ್ಧದ ನಿಯಮ ಉಲ್ಲಂಘನೆ ಆರೋಪಗಳ ಹಿನ್ನೆಲೆಯಲ್ಲಿ ಅಮೆರಿಕದ ಅಧಿಕಾರಿಗಳು ಇತರ ಭಾರತೀಯ ಐಟಿ ಕಂಪನಿಗಳ ಮೇಲೂ ನಿಗಾ ಹೆಚ್ಚಿಸುವ ಸಾಧ್ಯತೆಯಿದೆ ಎಂಬ ವರದಿಗಳು ಟೆಕ್ಕಿಗಳಲ್ಲಿ ಆತಂಕ ಮೂಡಿಸಿವೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular