HomeIndiaಬ್ರಿಕ್ಸ್ ಶೃಂಗಸಭೆ: ಭಾರತದಲ್ಲಿ ಸ್ಟಾರ್ಟ್ ಅಪ್ ಗಳ ಕ್ರಾಂತಿ ಆರಂಭವಾಗಿದೆ: ಇಂಧನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶ ವೇಗವಾಗಿ...

ಬ್ರಿಕ್ಸ್ ಶೃಂಗಸಭೆ: ಭಾರತದಲ್ಲಿ ಸ್ಟಾರ್ಟ್ ಅಪ್ ಗಳ ಕ್ರಾಂತಿ ಆರಂಭವಾಗಿದೆ: ಇಂಧನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ದೇಶ ವೇಗವಾಗಿ ಪ್ರಗತಿ ಸಾಧಿಸುತ್ತಿದೆ: ಪ್ರಧಾನಿ ಮೋದಿ

ನವದೆಹಲಿ: ಬ್ರಿಕ್ಸ್ ದೇಶಗಳು ಜಾಗತಿಕ ನಾವೀನ್ಯತೆಯ ದೊಡ್ಡ ಕೇಂದ್ರಗಳಾಗುತ್ತಿವೆ. ಬ್ರಿಕ್ಸ್ 4 ದೇಶಗಳ ಕುಟುಂಬದಿಂದ 21 ದೇಶಗಳವರೆಗೆ ಬೆಳೆದಿದೆ.ವಿಶ್ವದ ಅರ್ಧದಷ್ಟು ಜನಸಂಖ್ಯೆ ಬ್ರಿಕ್ಸ್ ದೇಶಗಳಲ್ಲಿದೆ. ಭಾರತ ಇಂಧನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬ್ರಿಕ್ಸ್ ಶೃಂಗಸಭೆಯ ವ್ಯಾಪಾರ ವೇದಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಭಾರತ ಇಂಧನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಭಾರತ ಇಂದು ಜಾಗತಿಕ ಪರಿಹಾರಗಳ ಕೇಂದ್ರವಾಗಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಸಭೆ ಆಯೋಜಿಸಿದ್ದು, ಸುಸ್ಥಿರತೆ ನಮ್ಮ ಪ್ರಮುಖ ಉದ್ದೇಶವಾಗಿದೆ. ಜಾಗತಿಕ ಅನಿಶ್ಚಿತತೆ ನಡುವೆ ಭಾರತ ಸುಸ್ಥಿರವಾಗಿದೆ. ಭಾರತದಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿದೆ. ಭಾರತ ಹೊಸ ಅವಕಾಶಗಳ ಕೇಂದ್ರವಾಗಿದೆ. ಇಂದು ಭಾರತದಲ್ಲಿ ಸ್ಟಾರ್ಟ್ ಅಪ್ ಕ್ರಾಂತಿಯಾಗುತ್ತಿದ್ದು, ಜಾಗತಿಕವಾಗಿ ಸಮಸ್ಯೆಗಳ ಪರಿಹಾರ ಕೇಂದ್ರ ಭಾರತವಾಗಿದೆ. ಬಾಹ್ಯಕಾಶ, ರಕ್ಷಣೆ ಸೇರಿದಂತೆ ಹಲವು ವಲಯದಲ್ಲಿ ಹೊಸ ಸಂಶೋಧನೆಗಳು ಭಾರತದಲ್ಲಿ ನಡೆಯುತ್ತಿವೆ. ಯುಪಿಐ ಮೂಲಕ ದೇಶದ 50% ವಹಿವಾಟು ನಡೆಯುತ್ತಿದೆ. 2014 ರ ನಂತರ ನಾವು 40 ದೇಶಗಳ ಜೊತೆಗೆ ಮುಕ್ತ ವ್ಯಾಪರ ಒಪ್ಪಂದ ಮಾಡಿಕೊಂಡಿದ್ದೇವೆ. ವ್ಯಾಪರಕ್ಕೆ ಹೊಸ ಅವಕಾಶ ಸೃಷ್ಟಿಸುತ್ತಿದ್ದೇವೆ ಎಂದಿದ್ದಾರೆ.

ಬ್ರಿಕ್ಸ್ ದೇಶಗಳು ಜಾಗತಿಕ ನಾವೀನ್ಯತೆಯ ದೊಡ್ಡ ಕೇಂದ್ರಗಳಾಗುತ್ತಿವೆ. ವಿಶ್ವದ ಬೆಳವಣಿಗೆ ಎರಡೂವರೆ ಪಟ್ಟು ಹೆಚ್ಚಾಗಿದೆ ಮತ್ತು ಬ್ರಿಕ್ಸ್ ದೇಶಗಳ ಒಟ್ಟಾರೆ ಜಿಡಿಪಿ 4 ಪಟ್ಟು ಹೆಚ್ಚಾಗಿದೆ ಎಂದರು.

ಜಗತ್ತು ರಚನಾತ್ಮಕ ಬದಲಾವಣೆ ಮೂಲಕ ಸಾಗುತ್ತಿದೆ.ಬದಲಾವಣೆಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ, ಬ್ರಿಕ್ಸ್ G7 ಗಿಂತ ಮುಂದಿದೆ, ಜಾಗತಿನ ಆರ್ಥಿಕತೆಯ 40% ಭಾಗ ಬ್ರಿಕ್ಸ್ ದೇಶಗಳಿಂದ ಬರುತ್ತಿದೆ. ಭಾರತದಲ್ಲಿ 2 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ಗಳು, 120ಕ್ಕೂ ಅಧಿಕ ಯೂನಿಕಾರ್ನ್‌ಗಳು ಭಾರತ ಇಂದು ಗ್ಲೋಬಲ್ ಸೊಲ್ಯೂಷನ್ಸ್‌ಗಳ ಹಬ್ ಆಗಿ ಹೊರಹೊಮ್ಮುತ್ತಿದೆ. ಇದರ ಝಲಕ್‌ ಬ್ರಿಡ್ಜ್ ಇಂಡಿಯಾ ಇನ್ನೋವೇಷನ್ ಎಕ್ಸ್‌ಪೋದಲ್ಲಿ ಕಾಣಿಸಲಿದೆ. ಭಾರತೀಯ ಸ್ಟಾರ್ಟ್‌ಅಪ್‌ಗಳಿಂದ AI, ಎಜುಕೇಷನ್, ಹೆಲ್ತ್‌ಕೇರ್ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗ್ರೀನ್ ಹೈಡ್ರೋಜನ್ ಮತ್ತು ಬ್ಯಾಟರಿ ಟೆಕ್ನಾಲಜಿ ಮೇಲೂ ಮಹತ್ವದ ಕೆಲಸ. ಡಿಫೆನ್ಸ್ ಮತ್ತು ಸ್ಪೇಸ್‌ ಕ್ಷೇತ್ರದಲ್ಲೂ ಹೊಸ ಗಡಿಗಳನ್ನು ದಾಟುತ್ತಿದೆ. ಡಿಜಿಟಲ್ ಟೆಕ್ನಾಲಜಿಯಿಂದ ಫೈನಾನ್ಷಿಯಲ್ ಇನ್‌ಕ್ಲೂಷನ್ ಮತ್ತು ಡಿಜಿಟಲ್ ಟ್ರಾನ್ಸಾಕ್ಷನ್‌ಗೆ ವೇಗ ಸಿಗುತ್ತಿದೆ. ವಿಶ್ವದ ಸುಮಾರು 50% ರಿಯಲ್‌ಟೈಮ್ ಪೇಮೆಂಟ್‌ಗಳು ಇದೇ ತಂತ್ರಜ್ಞಾನದ ಮೂಲಕ ನಡೆಯುತ್ತಿವೆ ಎಂದು ಹೇಳಿದರು.

ಇನ್ನು ಸಾಗರ ಮಾರ್ಗಗಳು ಸುರಕ್ಷಿತವಾಗಿದ್ದಾಗ, ಸರಬರಾಜು ಮಾರ್ಗಗಳು ಮುಕ್ತವಾಗಿದ್ದಾಗ ನಾವಿಕರು ಸುರಕ್ಷಿತವಾಗಿದ್ದಾಗ ಮಾತ್ರ ಜಾಗತಿಕ ವ್ಯಾಪಾರದ ಪ್ರಗತಿ ಸಾಧ್ಯ. ಅದಕ್ಕಾಗಿಯೇ ಭಾರತವು ನೌಕಾಯಾನದ ಸ್ವಾತಂತ್ರ್ಯ ಮತ್ತು ನಾವಿಕರ ಸುರಕ್ಷತೆಯ ದೃಢ ಬೆಂಬಲಿಗವಾಗಿದೆ ಎಂದರು.

ಬ್ರಿಕ್ಸ್ ಮಹಿಳಾ ವಾಣಿಜ್ಯ ಮೈತ್ರಿಕೂಟವು ನಮ್ಮ ದೃಷ್ಟಿಕೋನದ ಪ್ರಮುಖ ಭಾಗವಾಗಿದೆ. ನಮ್ಮ ಅಭಿವೃದ್ಧಿ ಪಯಣದಲ್ಲಿ ಮಹಿಳಾ ಉದ್ಯಮಿಗಳು ಮುಂಚೂಣಿಯಲ್ಲಿರಬೇಕು. ಭಾರತದಲ್ಲಿ ನಡೆದ ಬ್ರಿಕ್ಸ್ ಮಹಿಳಾ ವಾಣಿಜ್ಯ ಮೈತ್ರಿಕೂಟದ ಸಭೆಯಲ್ಲಿ ಸುಮಾರು 200 ಮಹಿಳಾ ಉದ್ಯಮಿಗಳು ಭಾಗವಹಿಸಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದಕ್ಕೂ ಮುನ್ನ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಭಾರತ್ ಮಂಟಪದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.

ಈ ವೇಳೆ ಪುಟಿನ್ ಅವರಿಗೆ ತಮಿಳು ಸಾಹಿತ್ಯ ಲೋಕದ ಖ್ಯಾತ ಕವಿ ತಿರುವಳ್ಳುವರ್ ರಚನೆಯ ರಷ್ಯನ್ ಆವೃತ್ತಿಯ ಕೃತಿ ‘ತಿರುಕ್ಕುರಳ್’ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಇದು ಜನರಿಂದ ಜನರಿಗೆ ಸಂಪರ್ಕ, ಮಾನವ ಜೀವನದ ಕುರಿತು ನಮ್ಮ ಸಂಬಂಧ ಮತ್ತಷ್ಟು ಬಲಪಡಿಸುವ ಪುಸ್ತಕ ಎಂದು ವಿವರಿಸಿದರು. ಈ ಕೃತಿ ಭಾರತದ ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ವಿವರಿಸಿದರು. ಪುಸ್ತಕದ ಬಗ್ಗೆ ಮಾಹಿತಿ ಪಡೆದುಕೊಂಡ ರಷ್ಯಾ ಅಧ್ಯಕ್ಷರು, ಈ ಅಮೂಲ್ಯ ಕೃತಿಯನ್ನು ಉಡುಗೊರೆಯಾಗಿ ನೀಡಿದ್ದಕ್ಕೆ, ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular