ʼಬಜೆಟ್ʼ ವೇಳೆ ನಿರ್ಮಲಾ ಸೀತಾರಾಮನ್ ಧರಿಸಿದ್ದ ಸೀರೆ ವಿಶೇಷತೆಯೇನು ಗೊತ್ತಾ ?

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಟಸ್ಸಾರ್‌ ರೇಷ್ಮೆ ಸೀರೆ ಧರಿಸಿ ಇಂದು ಮಧ್ಯಂತರ ಬಜೆಟ್‌ ಮಂಡನೆ ಮಾಡಿದ್ದಾರೆ. ಈ ಸೀರೆ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಭಾಗಲ್ಪುರವನ್ನು ರೇಷ್ಮೆ ನಗರ ಎಂದು ಕರೆಯಲಾಗುತ್ತದೆ. ಅಲ್ಲಿಯೇ ಈ ಟಸ್ಸಾರ್‌ ಸಿಲ್ಕ್‌ ಸೀರೆ ಸಿದ್ಧವಾಗುತ್ತದೆ. ದೇಶ ಮಾತ್ರವಲ್ಲದೆ ವಿದೇಶದಲ್ಲೂ ಈ ಸೀರೆಗೆ ಸಾಕಷ್ಟು ಬೇಡಿಕೆ ಇದೆ.

ಈ ಸೀರೆ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಸೀರೆ ಹಳೆಯದಾದಷ್ಟು ಹೊಳಪು ಪಡೆಯುತ್ತದೆ. ಆದ್ರೆ ಈ ಸುಂದರವಾದ ಸೀರೆ ಬೆಲೆ ದುಬಾರಿ ಏನಿಲ್ಲ. ವರದಿ ಪ್ರಕಾರ ಈ ಸೀರೆ ಮೂರು ಸಾವಿರಕ್ಕೂ ಲಭ್ಯವಿದೆ. ಸೀರೆಯ ಗರಿಷ್ಠ ಬೆಲೆ 10,000 ರೂಪಾಯಿ. ಈ ಸೀರೆಯನ್ನು 20 ರಿಂದ 25 ದಿನಗಳಲ್ಲಿ ಸಿದ್ಧಪಡಿಸಲಾಗುತ್ತದೆ. ಮೊದಲು ದಾರವನ್ನು ತೆಗೆಯಲಾಗುತ್ತದೆ. ನಂತ್ರ ಅದನ್ನು ತೊಳೆದು ಒಣಗಿಸಿ ನಂತ್ರ ಸೀರೆಯ ಮಗ್ಗದ ಮೇಲೆ ದಾರವನ್ನು ಹಾಕಿ ಸೀರೆ ತಯಾರಿಸಲಾಗುತ್ತದೆ. ಹೆಚ್ಚು ವರ್ಕ್‌ ಇರುವ ಸೀರೆ ಬೆಲೆ ಹೆಚ್ಚಾಗುತ್ತದೆ.

ಬಾಲಿವುಡ್‌ ನ ಅನೇಕ ನಟಿಯರು ಈ ಸೀರೆಯುಟ್ಟು ಮಿಂಚಿದ್ದಾರೆ. ಗಣರಾಜ್ಯೋತ್ಸವದ ಸಮಯದಲ್ಲಿ ಈ ಸೀರೆಯನ್ನು ಟ್ಯಾಬ್ಲೋ ಮೂಲಕ ತೋರಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read